ಸೈಬರ್ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪೊಲೀಸ್, ವಕೀಲ ಹಾಗೂ ಸರ್ಕಾರಿ ಅಧಿಕಾರಿಯ ಹೆಸರಿನಲ್ಲೂ ಅಮಾಯಕ ಜನರನ್ನು ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ. ಸೈಬರ್ ವಂಚಕರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ವಂಚಕರ ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಇತರ ರಾಜ್ಯಗಳಲ್ಲಿ ತುಳಿತುಕೊಂಡು ಇಂತಹ ವಂಚಕರು ಕಾರ್ಯಾಚರಣೆ ನಡೆಸುತ್ತಾರೆ. ಇದರ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ನಡೆಸಿದರೂ ವಂಚಕರು ಭಿನ್ನ ಹಾದಿಯನ್ನು ಕಂಡುಕೊಂಡು ವಂಚನೆ ನಡೆಸುತ್ತಿದ್ದಾರೆ.
ಜಮೀನು ಒತ್ತುವರಿ ಪ್ರಕರಣ: ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ!
ಎಟಿಎಂನಿಂದ ಹಣ ತೆಗೆಯುವಾಗ ನೀವು ಅಪ್ಪಿತಪ್ಪಿ ಈ ಕೆಲಸ ಮಾಡಿದ್ರೆ ನಿಮ್ಮ ಖಾತೆಯನ್ನು ಈ ಖದೀಮರು ಖಾಲಿ ಮಾಡುತ್ತಾರೆ. ಈ ಎಟಿಎಂ ವಂಚಕರು ತುಂಬಾ ಕುತಂತ್ರಿಗಳಾಗಿದ್ದು, ಸಾಮಾನ್ಯವಾಗಿ ವೃದ್ಧರನ್ನು ಗುರಿಯಾಗಿಸಿಕೊಂಡಿದ್ದಾರೆ. ತಂತ್ರಜ್ಞಾನ ಜ್ಞಾನವಿಲ್ಲದವರು ಈ ವಂಚಕರ ಬಲೆಗೆ ಬೀಳುತ್ತಾರೆ.
ಸಹಾಯದ ಹೆಸರಲ್ಲಿ ಬಂದು ಈ ಖದೀಮರು ಎಟಿಎಂನಲ್ಲಿ ಹಣ ಹೊಡೆಯುತ್ತಿದ್ದಾರೆ. ಯಾರಿಗೆ ಎಟಿಎಂನಲ್ಲಿ ದುಡ್ಡು ತೆಗೆದುಕೊಳ್ಳಲು ಬರುವುದಿಲ್ಲ ಅಂತವರೇ ಇವರ ಟಾರ್ಗೆಟ್. ಎಟಿಎಂನಲ್ಲಿ ಸಮಸ್ಯೆಯಾಗ್ತಿದೆ. ನಾವು ನಿಮಗೆ ಸಹಾಯ ಮಾಡ್ತೀವಿ, ಎಟಿಎಂ ಕಾರ್ಡ್ ಕೊಡಿ ನಾವು ಹಣ ತಗೆದುಕೊಡ್ತೀವಿ ಎಂದು ನಂಬಿಸ್ತಾರೆ. ಇದೇ ನೆಪದಲ್ಲಿ ಎಟಿಎಂ ಕಾರ್ಡ್ಗಳನ್ನು ಬದಲಾಯಿಸುತ್ತಾರೆ. ನಂತರ ಎಟಿಎಂ ಕಾರ್ಡ್ ಸಮಸ್ಯೆಯಾಗಿದೆ. ನಾಳೆ ಪ್ರಯತ್ನಿಸಿ ಅಂತಾರೆ. ಆದರೆ ಅಷ್ಟರೊಳಗೆ ನಿಜವಾದ ಕಾರ್ಡ್ ಬಳಸಿ ಖಾತೆಯನ್ನು ಖಾಲಿ ಮಾಡುತ್ತಾರೆ.
ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಇಂತಹ ವಂಚನೆ ಜಾಲವನ್ನು ಪೊಲೀಸರು ಹಿಡಿದಿದ್ದಾರೆ. ಸಹಾಯದ ಹೆಸರಿನಲ್ಲಿ ಅವರು ಗ್ರಾಹಕರ ಎಟಿಎಂ ಕಾರ್ಡ್ಗಳನ್ನು ಬದಲಾಯಿಸಿ ಗ್ರಾಹಕರ ಖಾತೆಗಳಿಂದ ಎಲ್ಲಾ ಹಣವನ್ನು ಡ್ರಾ ಮಾಡಿಕೊಳ್ತಿದ್ದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಚಿತ್ರಕೂಟ ವಂಚಕರು ಎಟಿಎಂ ಹೊರಗೆ ನಿಂತಿದ್ದು, ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಕಾರ್ಡ್ಗಳನ್ನು ಬದಲಾಯಿಸುತ್ತಿದ್ದರು. ನಂತರ, ನಿಜವಾದ ಕಾರ್ಡ್ ಬಳಸಿ ಗ್ರಾಹಕರ ಖಾತೆಯನ್ನು ಖಾಲಿ ಮಾಡುತ್ತಿದ್ದರು. ಈ ರೀತಿಯಾಗಿ, ಗ್ಯಾಂಗ್ ಸಾವಿರಾರು ರೂಪಾಯಿಯನ್ನು ಲೂಟಿ ಮಾಡಿದೆ ಎಂದು ತಿಳಿದುಬಂದಿದೆ.
ವಂಚನೆಗೆ ಬಲಿಯಾದ ಗ್ರಾಹಕರೊಬ್ಬರು ಪೊಲೀಸರಿಗೆ ಎಟಿಎಂನಿಂದ ಹಣ ತೆಗೆಯಲು ಹೋಗಿದ್ದೆ ಎಂದು ಹೇಳಿದ್ದಾರೆ. ಸಹಾಯ ಮಾಡುವ ನೆಪದಲ್ಲಿ, ಮೂರು ಜನರು ಅವರ ಎಟಿಎಂ ಕಾರ್ಡ್ ಬದಲಾಯಿಸಿದರು. ನಂತರ, ಮನೆಗೆ ತಲುಪಿದಾಗ, ಅವರ ಮೊಬೈಲ್ ಫೋನ್ಗೆ ಖಾತೆಯಿಂದ 23,000 ರೂಪಾಯಿಯನ್ನು ಹಿಂಪಡೆಯಲಾಗಿದೆ ಎಂದು ಮೆಸೇಜ್ ಬಂತು ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದರು. ದೂರು ಸ್ವೀಕರಿಸಿ ತನಿಖೆಗೆ ಇಳಿದ ಪೊಲೀಸರು ಎಟಿಎಂ ಬೂತ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ರು. ಇದರಿಂದ ಮೂವರ ಗುರುತು ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರು ಆ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿ, ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ