ಬೆಂಗಳೂರು:- ಸುಳ್ಳು ಕೇಸ್ ನಲ್ಲಿ ಪೊಲೀಸರಿಂದ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧಿಸಿದ ಆರೋಪದಡಿ ನಾಲ್ವರು ಪೊಲೀಸರು ಅಮಾನತು ಮಾಡಿ ಪೂರ್ವ ವಿಭಾಗ ಡಿಸಿಪಿ ಡಿ.ದೇವರಾಜ್ ಆದೇಶ ಹೊರಡಿಸಿದ್ದಾರೆ.
ಹಾಲು-ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರೊಟೆಸ್ಟ್!
ರಾಮಮೂರ್ತಿ ನಗರದ ಎಎಸ್ಐ ಗುಣಶೇಖರ್ ಸೇರಿದಂತೆ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಕೇರಳ ಮೂಲದ ರಾಜೀವ್ ತಮ್ಮ ಕಾರು ಮಾರಾಟಕ್ಕೆ ಮುಂದಾಗಿದ್ದರು. ಆದರೆ ಕಳ್ಳತನದ ಕಾರು ಮಾರಾಟಕ್ಕೆ ಯತ್ನ ಎಂದು ರಾಜೀವ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಗುಣಶೇಖರ್ ನನ್ನ ಠಾಣೆಗೆ ಕರೆದುಕೊಂಡು ಬಂದು ಹಣಕ್ಕೆ ಬೇಡಿಕೆ ಇಟ್ಟಿದ್ರು.
ಈ ಬಗ್ಗೆ ಗುಣಶೇಖರ್ ಕುಟುಂಬ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿತ್ತು. ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಠಾಣೆ ಮೇಲೆ ದಾಳಿ ಮಾಡಿದ್ರು. ಈ ವೇಳೆ ಹಿಂಬಾಗಿಲ ಮೂಲಕ ಗುಣಶೇಖರ್ ರನ್ನ ಪೊಲೀಸರು ಹೊರಕಳಿಸಿದ್ದರು. ಈ ಸಂಬಂಧ ಸಿಸಿಟಿವಿ ಪರಿಶೀಲನೆಯಲ್ಲಿ ಅಕ್ರಮ ಬಂಧನ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ಎಎಸ್ಐ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಪೂರ್ವ ವಿಭಾಗ ಡಿಸಿಪಿ ಡಿ.ದೇವರಾಜ್ ಆದೇಶ ಹೊರಡಿಸಿದ್ದಾರೆ.