ಸಮಂತಾ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿ ಆಸ್ಟ್ರೇಲಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆಸ್ಟ್ರೇಲಿಯಾದ ಸುಂದರ ಜಾಗದಲ್ಲಿ ಜಾಲಿ ಮಾಡಿರುವ ಸ್ಯಾಮ್ ಅಲ್ಲಿಯು ಫಿಟ್ನೆಸ್ ಮಂತ್ರ ಮರೆತಿಲ್ಲ. ಸಿಡ್ನಿ ಸೌಂದರ್ಯಕ್ಕೆ ಸೋತ ಸಮಂತಾ ವರ್ಕೌಟ್, ಬಾಡಿ ಮಸಾಜ್ ಮೊರೆ ಹೋಗಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಸಮಯ ಸಿಕ್ಕಾಗಲೆಲ್ಲಾ ಒಂಟಿಯಾಗಿಯೇ ಟ್ರಿಪ್ ಗೆ ಹೋಗ್ತಾರೆ. ಸಮಯ ಕಳೆಯುತ್ತಾರೆ. ಅಂತೆಯೇ ಈ ಬಾರಿ ಸಮಂತಾ ಬೇಬಿ ಆಸ್ಟ್ರೇಲಿಯಾದಲ್ಲಿ ಏಕಾಂತವನ್ನು ಏಂಜಾಯ್ ಮಾಡುತ್ತಿದ್ದಾರೆ. ನಾಗಚೈತನ್ಯರಿಂದ ದೂರವಾದ್ಮೇಲೆ ಹೊಸ ದಾರಿ ಕಂಡುಕೊಂಡಿರುವ ಸಮಂತಾ ಬಾಲಿವುಡ್ ಸಿನಿಮಾರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ.
ಚಿತ್ರ ನಿರ್ಮಾಣಕ್ಕೂ ಸಮಂತಾ ಇಳಿದಿದ್ದು, ಈ ನಡುವೆಯೇ ಅವರು ನಿರ್ಮಾಪಕ ರಾಜ್ ನಿಡಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇದಕ್ಕೆ ಇಲ್ಲಿವರೆಗೂ ಸಮಂತಾ ಪ್ರತಿಕ್ರಿಯೆ ನೀಡಿಲ್ಲ. ಇದು ಗಾಳಿ ಸುದ್ದಿಯೋ ಅನ್ನೋದನ್ನು ನಟಿ ಖಚಿತ ಮಾಡಿಲ್ಲ.