ನಾನು ಬರೋವರೆಗೂ ಮಾತ್ರ ಬೇರೆಯವರ, ನಾನು ಬಂದ್ಮೇಲೆ ನನ್ ನಂದೇ ಹವಾ..ಕೆಜಿಎಫ್ ಬಂದ್ಮೇಲೆ ಇಂಡಿಯನ್ ಸಿನಿದುನಿಯಾದಲ್ಲಿ ನ್ಯಾಷನಲ್ ಸ್ಟಾರ್ ಯಶ್ ಹವಾ ಹೇಗಿದೆ ಅನ್ನೋದನ್ನು ನಾವೇನು ಹೊಸದಾಗಿ ಹೇಳೋದು ಬೇಡ. ಕೆಜಿಎಫ್ ಸರಣಿ ಸಿನಿಮಾ ಮೂಲಕ ಚಿನ್ನದ ಕಥೆ ಹರವಿಟ್ಟಿದ್ದ ರಾಕಿಭಾಯ್ ಟಾಕ್ಸಿಕ್ ಮೂಲಕ ಡ್ರಗ್ಸ್ ಜಗತ್ತಿನ ಕರಾಳ ಲೋಕದ ಕಥೆಯನ್ನು ಬಿಚ್ಚಿಡೋದಿಕ್ಕೆ ಹೊರಟ್ಟಿದ್ದಾರೆ. ಈ ಬಾರಿ ಅಣ್ತಮ್ಮಾನ ಬಳಗದಲ್ಲಿ ಸ್ಯಾಂಡಲ್ ವುಡ್ ಜೊತೆಗೆ ಬಾಲಿವುಡ್, ಹಾಲಿವುಡ್ ತಾರೆಯರು, ತಂತ್ರಜ್ಞಾನರು ದುಡಿಯುತ್ತಿದ್ದಾರೆ. ಸಣ್ಣ ಝಲಕ್ ಮೂಲಕ ಟಾಕ್ಸಿಕ್ ಅಭಿಮಾನಿಗಳ ವಲಯದಲ್ಲಿ ಟೆಂಪರ್ ಹೆಚ್ಚಿಸಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಟಾಕ್ಸಿಕ್ ಪ್ಯಾನ್ ಇಂಡಿಯಾ ಜಗತ್ತಿನ ತುಂಬೆಲ್ಲಾ ಮೆರವಣಿಗೆ ಹೊರಡುತ್ತಿದೆ.
ಟಾಕ್ಸಿಕ್ ಜೊತೆಯಲ್ಲಿ ಯಶ್ ನಟಿಸಿ ನಿರ್ಮಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಪ್ರಾಜೆಕ್ಟ್ ರಾಮಾಯಣ. ಬಾಲಿವುಡ್ ಬರ್ಫಿ ಬಾಯ್ ರಣ್ಬೀರ್ ಕಪೂರ್ ನಟಿಸುತ್ತಿರುವ ರಾಮಾಯಾಣಲ್ಲಿ ಮೇಹೂ ವಿಲನ್ ಅಂತಾ ಯಶ್ ಈಗಾಲೇ ಘೋಷಣೆ ಮಾಡಿದ್ದಾರೆ. ರಾವಣನಾಗಿ ಅಬ್ಬರಿಸೋದಿಕ್ಕೆ ರಾಕಿಭಾಯ್ ಸನ್ನದ್ಧರಾಗಿದ್ದಾರೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ರಾಮಾಯಣ ಎರಡು ಭಾಗದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಸದ್ಯ ಶೂಟಿಂಗ್ ಭರದಿಂದ ಸಾಗುತ್ತಿದೆ.
ದೀಪಾವಳಿಗೆ ರಾಮಾಯಣ?
ನಿತೀಶ್ ತಿವಾರಿ ನಿರ್ದೇಶನದ ಚಿತ್ರ ತಯಾರಾಗುತ್ತಿದೆ. ರಾಮಾಯಣ ಸಿನಿಮಾದ ಈ ದೃಶ್ಯಗಳಲ್ಲಿ ಅತ್ಯಧಿಕ ವಿಎಫ್ಎಕ್ಸ್ ಬಳಸಲಾಗ್ತಿದ್ದು, ಆ್ಯಕ್ಷನ್ಸ್ ಮೇಜರ್ ಹೈಲೈಟ್ ಆಗಿರಲಿದೆ. ರಣಬೀರ್ ಕಪೂರ್ ರಾಮನಾಗಿ, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 2026ಕ್ಕೆ ರಾಮಾಯಣ ಮೊದಲ ಭಾಗ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ದೀಪಾವಳಿ ಹಬ್ಬ ರಾಮಾಯಣ ತೆರೆಗೆ ಬರಲಿದೆಯಂತೆ. ಹೀಗಿದ್ಮೇಲೆ ಮುಂದಿನ ವರ್ಷ ರಾಕಿಭಾಯ್ ದ್ದೇ ಹವಾ ಅಂದ್ರೆ ತಪ್ಪಾಗಲಿಕ್ಕಿಲ್ಲ. ಎರಡು ಮೆಗಾ ಪ್ರಾಜೆಕ್ಟ್ ಮೂಲಕ ಕೆಜಿಎಫ್ ಕಿಂಗ್ ನಿಮ್ಮ ಮುಂದೆ ಹಾಜರಿ ಹಾಕಲಿದ್ದಾರೆ.