ಬೆಂಗಳೂರು: ನಗರದ ಪುರಭವನದಲ್ಲಿ ಇಂದು 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದ್ದಾರೆ. ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯವನ್ನು ಚುನಾಯಿತ ಕೌನ್ಸಿಲರ್ಗಳ ಅನುಪಸ್ಥಿತಿಯಲ್ಲಿ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಈ ಸಲ ದಾಖಲೆ ಗಾತ್ರದ ಬಜೆಟ್ ಮಂಡನೆಯಾಗಿದೆ.
ಈ ಬಾರಿ 19,900 ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಈ ಬಜೆಟ್ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾಗಿ ಬಜೆಟ್ ಮಂಡನೆಯಾಗಿದೆ ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಿದ್ದು,
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ..!
ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಿದೆ. 19,92,708 ಕೋಟಿ ಗಾತ್ರದ ಬಜೆಟ್ ಗೆ ಆಡಳಿತಗಾರ ಉಮಾಶಂಕರ್ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಶೇಕಡಾ 62 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಪಾಲಿಕೆ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು?
- ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರಿನಲ್ಲಿ 7 ಫಿಸಿಯೋಥೆರಪಿ ಕೇಂದ್ರಗಳ ಸ್ಥಾಪನೆ.
- ಗರ್ಭಿಣಿಯರು, ನವಜಾತ ಶಿಶುಗಳ ಆರೈಕೆಗೆ ‘ಸೇವ್ ಮಾಮ್ AI’ ಯೋಜನೆ.
- ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ರೂ ಅನುದಾನ.
- ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಹೊಸ ಆಸ್ಪತ್ರೆಗಳ ನಿರ್ಮಾಣ, 852 ಹಾಸಿಗೆಗಳ ಸಾಮರ್ಥ್ಯವನ್ನು 1122 ಹಾಸಿಗೆಗಳಿಗೆ ಹೆಚ್ಚಳ, 26 ಹೊಸ ಕೇಂದ್ರಗಳಲ್ಲಿ ಡೆಂಟಲ್ ಆಸ್ಪತ್ರೆಗಳ ನಿರ್ಮಾಣ.
- ಬೆಂಗಳೂರು ನಗರದ ಬಡವರು, ವಲಸಿಗರು, ಅಲೆಮಾರಿಗರಿಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಯೋಜನೆ ಜಾರಿ.
- ಯೋಜನೆ ಕಾರ್ಯನಿಯೋಜನೆಗಾಗಿ 144 ಎಲೆಕ್ಟ್ರಿಕ್ ವಾಹನ, ಎಮರ್ಜೆನ್ಸಿ ವೇಳೆ ತುರ್ತು ಆರೈಕೆಗೆ 26 BLS ಆ್ಯಂಬುಲೆನ್ಸ್ಗಳ ಖರೀದಿ.
- 200 ಬೆಡ್ಗಳ 24X7 ಆರೈಕೆ ಕೇಂದ್ರಗಳ ಸ್ಥಾಪನೆ, 2 ರೆಫೆರಲ್ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಜನೆ, ಎಂಸಿ ಲೇಔಟ್ನಲ್ಲಿ 300 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಲಾಗಿದ್ದು, ಆಸ್ಪತ್ರೆ ನಿರ್ಮಾಣಕ್ಕಾಗಿ 633 ಕೋಟಿ ರೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
- ಬೀದಿ ನಾಯಿಗಳ ನಿರ್ವಹಣೆಗೆ 60 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 75,000 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ, 1,80,0000 ನಾಯಿಗಳಿಗೆ ವ್ಯಾಕ್ಸಿನ್ ಹಾಕಲು ಯೋಜನೆಗೆ ಮುಂದಾಗಿದ್ದು, ಪಾಲಿಕೆ 6 ವಲಯದಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯ ಆರಂಭ.
- ಹೊಸದಾಗಿ ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರೂ., ಕಸಾಯಿಖಾನೆ ನಿರ್ವಹಣೆಗೆ 2 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
- 225 ವಾರ್ಡ್ಗಳ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗೆ 2.50 ಕೋಟಿಗಳಂತೆ ಹಾಗೂ ನಿರ್ವಹಣೆ ಕಾಮಗಾರಿಗಳಿಗಾಗಿ 50 ಲಕ್ಷಗಳಂತೆ ಒಟ್ಟಾರೆ 675 ಕೋಟಿ ರೂ ಅನುದಾನ.
- ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ 3 ವರ್ಷಗಳ ಅವಧಿಗೆ ಒಟ್ಟು 2828.00 ಕೋಟಿಗಳ ಬೃಹತ್ ಯೋಜನೆಗಳ ಪ್ರಸ್ತಾವನೆ ನೀಡಲಾಗಿದೆ.
- 2024 -25ನೇ ಸಾಲಿನಲ್ಲಿ ಈಗಾಗಲೇ ರೂ.660 ಕೋಟಿ ರೂ ವರ್ಗಾಯಿಸಲಾಗಿದೆ. 2025-26 ಸಾಲಿನಲ್ಲಿ ರೂ.700 ಕೋಟಿ ರೂ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಸದರಿ ಮೊತ್ತವನ್ನು ಸಹ ಎಸ್ಕೋ ಖಾತೆಗೆ ವರ್ಗಾಯಿಸಲಾಗುವುದು.
- ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಎಬಿಸಿ ಕೇಂದ್ರ ಸ್ಥಾಪನೆಗೆ 7 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.