ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೋದ ಬಹುನಿರೀಕ್ಷಿತ ಸಿನಿಮಾ ಕೆಡಿ. ಶಿವ ಶಿವ ಅಂತಾ ಎಲ್ಲೆಡೆ ಹವಾ ಸೃಷ್ಟಿಸಿರುವ ಕೆಡಿ ಅಂಗಳದಿಂದ ಮತ್ತೊಂದು ಸಿಂಗಿಂಗ್ ಬಿಡುಗಡೆಯಾಗಿದೆ. ಸೆಟ್ ಆಗೋಲ್ಲ ಹೋಗೆ ನಂಗು ನಿಂಗು ಅಂತಾ ಧ್ರುವ ಸರ್ಜಾ, ಬ್ಯೂಟಿಫುಲ್ ಬೊಂಬೆ ರೀಷ್ಮಾ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೇಮ್ ಪೊಣಿಸಿದ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಮಿಕಾ ಸಿಂಗ್ ಕನ್ನಡದಲ್ಲಿ ಕಂಠ ಕುಣಿಸಿದ್ದಾರೆ. ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಹಾಡು ಸಖತ್ ವಿಭಿನ್ನವಾಗಿ ಮೂಡಿ ಬಂದಿದೆ. ಕೆಡಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಯಲ್ಲಿಯೂ ಸೆಟ್ ಆಗೋಲ್ಲ ಹೋಗೆ ಹಾಡನ್ನು ಬಿಡುಗಡೆ ಮಾಡಲಾಗಿದೆ.
ರಿಲೀಸ್ ಯಾವಾಗ?
ಕೆಡಿ ಸಿನಿಮಾ ಯಾವಾಗ ಬರಲಿದೆ ಅಂತಾ ಕಾಯ್ತಿದ್ದ ಧ್ರುವ ಸರ್ಜಾ ವಿಐಪಿಗಳಿಗೆ ಸಖತ್ ಸುದ್ದಿ ಸಿಕ್ಕಿದೆ. ಈ ವರ್ಷವೇ ಕಾಳಿದಾಸನಾಗಿ ಧ್ರುವ ಕಮಾಲ್ ಮಾಡಲು ತೆರೆಗೆ ಬರಲಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ಬೆಳ್ಳಿಪರದೆಗೆ ಅಖಾಡಕ್ಕೆ ಇಳಿಸಲು ಚಿತ್ರತಂಡ ಸಜ್ಜಾಗಿದೆ.
ಕೆಡಿಯಲ್ಲಿ ದೊಡ್ದ ದೊಡ್ಡ ತಾರೆಯರ ಸಮಾಗಮಾವಾಗಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದು, ರೀಷ್ಮಾ ನಾಣಯ್ಯ ಮಚ್ ಲಕ್ಷ್ಮೀ ಪಾತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜಯ್ ದತ್ , ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ತಾರಾಬಳಗದಲ್ಲಿದ್ದಾರೆ.
ಬೆಂಗಳೂರಿನ ಭೂಗತಲೋಕದ ಕಥೆ ಕೆಡಿ ಚಿತ್ರದಲ್ಲಿ ಹೈಲೆಟ್ ಎನ್ನಲಾಗ್ತಿದೆ. ಇದಕ್ಕಾಗಿಯೇ ಬೆಂಗಳೂರಿನ ರೆಟ್ರೋ ಕಾಲದ ದೊಡ್ಡ ಸೆಟ್ ಹಾಕಲಾಗಿತ್ತು. ಇಡೀ ಬೆಂಗಳೂರನ್ನ ಈ ಚಿತ್ರಕ್ಕಾಗಿ ಕ್ರಿಯೇಟ್ ಮಾಡಲಾಗಿತ್ತು. ಒಂದಲ್ಲ ಎರಡು ಭಾಗದ ಕಥೆಯನ್ನ ಈ ಸೆಟ್ ಅಲ್ಲಿಯೇ ತೆಗೆಯಲಾಗಿದೆ.
ಆಗಸ್ಟ್ ನಲ್ಲಿ ಜನ್ಯ ವರ್ಸಸ್ ಜನ್ಯನಾ?
ಕೆಡಿ ಸಿನಿಮಾಗೆ ಮಸ್ತ್ ಮ್ಯೂಸಿಕ್ ಕಿಕ್ ಕೊಟ್ಟಿರೋದು ಅರ್ಜುನ್ ಜನ್ಯ. ಆಗಸ್ಟ್ ತಿಂಗಳಲ್ಲಿ ಕೆಡಿ ಅಖಾಡಕ್ಕೆ ಇಳಿಯುತ್ತಿದೆ. ಇನ್ನೂ, ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ 45 ಕೂಡ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಹೀಗಾಗಿ ಬಾಕ್ಸಾಫೀಸ್ ನಲ್ಲಿಒ ಜನ್ಯ ವರ್ಸಸ್ ಜನ್ಯ ಕದನ ನಡೆಯಲಿದೆ ಎನ್ನಲಾಗುತ್ತಿದೆ.