ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಿಸಿಲಿನ ತಾಪಕ್ಕೆ ನಲುಗಿತ್ತು. ಬೇಸಿಗೆಯ ಭಾರೀ ಬಿಸಿಲಿನ ತಾಪಮಾನಕ್ಕೆ ಭಾರತದ ಉತ್ತರ ಹಾಗೂ ಪಶ್ಚಿಮ ಭಾಗಗಳು ಅಕ್ಷರಶಃ ಕಂಗೆಟ್ಟಿತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿ ಭಾಗಗಳಲ್ಲಿ ಕಳೆದ 2 ದಿನಗಳಲ್ಲಿ ತಾಪಮಾನ 7 ಡಿಗ್ರಿ ಇಳಿಕೆಯಾಗಿದ್ದು, ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇತ್ತು. ಶುಕ್ರವಾರದ ವೇಳೆಗೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು, ಕಳೆದ ಎರಡೂ ದಿನದಲ್ಲಿ ಈ ತಾಪಮಾನವನ್ನು ಮೀರಿಲ್ಲ ಎಂದು ವರದಿ ಮಾಡಿದೆ.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ..!
ಸಾಮಾನ್ಯವಾಗಿ ಒಂದು ಪ್ರದೇಶದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗಾಳಿಯ ಒತ್ತಡದಿಂದಾಗಿ ತಾಪಮಾನ ಇಳಿಕೆ ಕಾರಣವಾಗುತ್ತದೆ. ದೆಹಲಿಯ ಪೂರ್ವದಲ್ಲಿರುವ ಗೋರಖ್ಪುರ ಹಾಗೂ ಪಶ್ಚಿಮದಲ್ಲಿರುವ ಅಮೃತಸರದಲ್ಲಿ 10 ಗ್ರೇಡಿಯಂಟ್ ಪಾಯಿಂಟ್ ಗಾಳಿಯ ಒತ್ತಡವಿರುವುದರಿಂದ ದೆಹಲಿಯಲ್ಲಿ ತಾಪಮಾನ ಇಳಿಕೆಗೆ ಕಾರಣವಾಗಿದೆ.