2025 ಹೀಗಷ್ಟೇ ಆರಂಭವಾದಂತಿದೆ. ಆದರೆ ಮೂರು ತಿಂಗಳು ಕಳೆದು ಹೋಗಿದ್ದೇ ಗೊತ್ತೇ ಆಗಿಲ್ಲ. ಈ ಮೂರು ತಿಂಗಳಲ್ಲಿ ಕನ್ನಡ ಚಿತ್ರರಂಗ ಒಂದೊಳ್ಳೆ ಸಕ್ಸಸ್ ಕಂಡಿಲ್ಲ. ಹೊಸಬರ ಚಿತ್ರಗಳು ಬಂದಿದ್ದು ಗೊತ್ತಾಗ್ತಿಲ್ಲ. ಹೋಗಿದ್ದು ಗೊತ್ತಾಗ್ತಿಲ್ಲ ಅನ್ನೋ ಸ್ಥಿತಿಯಲ್ಲಿದೆ ಸ್ಯಾಂಡಲ್ ವುಡ್. ಪುನೀತ್ ರಾಜ್ ಕುಮಾರ್ ಅವರ 50 ದಿನಕ್ಕೆ ಬಂದ ಅಪ್ಪು ಅಬ್ಬರ ಬಿಟ್ರೆ..ಮತ್ಯಾವಾ ಚಿತ್ರಗಳ ಸೌಂಡ್ ಗಾಂಧಿನಗರ ದಾಟುತ್ತಿಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ಫಸ್ಟ್ ಆಫ್ ನಲ್ಲಿ ಕನ್ನಡ ಚಿತ್ರರಂಗ ತೀರಾ ಸಪ್ಪೆಯಾದ್ರೂ ಸೆಕೆಂಡ್ ಆಫ್ ನಲ್ಲಿ ಅಬ್ಬರ ಜೋರಾಗಿದೆ. ಯಾಕಂದ್ರೆ 2025ರ ಸೆಕೆಂಡ್ ಆಫ್ ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಅಖಾಡಕ್ಕೆ ಇಳಿಯುತ್ತಿವೆ. ಆ ಪೈಕಿ ಮೊದಲ ಸ್ಥಾನದಲ್ಲಿರುವುದೇ ಕಾಂತಾರ ಪ್ರೀಕ್ವೆಲ್.
ಅಕ್ಟೋಬರ್ ಗೆ ಕಾಂತಾರ ಪ್ರೀಕ್ವೆಲ್
ಡಿವೈನ್ ಹಿಟ್ ಕಂಡಿರುವ ಕಾಂತಾರ ಚಾಪ್ಟರ್ 2 ಸಿನಿಮಾದ ಪ್ರೀಕ್ವೆಲ್ ಕಣ್ತುಂಬಿಕೊಳ್ಳೋದಿಕ್ಕೆ ಪ್ಯಾನ್ ಇಂಡಿಯಾ ಪ್ರೇಕ್ಷಕ ಕಾತರದಿಂದ ಕಾಯುತ್ತಿದ್ದಾನೆ. ಕಾಡುಬೆಟ್ಟ ಶಿವ ಪ್ರೀಕ್ವೆಲ್ ಮೂಲಕ ಕದಂಬರ ಕಥೆಯನ್ನು ಹರವಿಡೋಲು ಹೊರಟ್ಟಿದ್ದು, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಸ್ಪೆಷಲ್ ಆಗಿ ಚಿತ್ರ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ಏಳು ಭಾಷೆಯಲ್ಲಿ ಕಾಂತಾರ ಪ್ರೀಕ್ವೆಲ್ ತೆರೆಗೆ ಬರ್ತಿದೆ. ಹೊಂಬಾಳೆ ಪ್ರೊಡಕ್ಷನ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ.
ಆಗಸ್ಟ್ ಗೆ 45 ಸಿನಿಮಾ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿ ಡೈರೆಕ್ಟರ್ ಗ್ಯಾಪ್ ತೊಟ್ಟು ನಿರ್ದೇಶಿಸಿರುವ ಚಿತ್ರ 45. ಈಗಾಗಲೇ ಒಂದಷ್ಟು ಸ್ಯಾಂಪಲ್ಸ್ ಮೂಲಕ ಇಂಡಸ್ಟ್ರೀಯ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿರು ಈ ಸಿನಿಮಾದಲ್ಲಿ ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಗಾಳಿಪಟ 2 ಖ್ಯಾತಿಯ ರಮೇಶ್ ರೆಡ್ಡಿ ನಿರ್ಮಾಣದ 45 ಸಿನಿಮಾ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನದಂದು ತೆರೆಗೆ ಬರ್ತಿದೆ.
ಆಗಸ್ಟ್ ಗೆ ಧ್ರುವ ಕೆಡಿ
ಆಗಸ್ಟ್ ತಿಂಗಳಲ್ಲಿ ಅಖಾಡಕ್ಕೆ ಇಳಿಯುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕೆಡಿ. ಧ್ರುವ ಸರ್ಜಾ ಹಾಗೂ ಪ್ರೇಮ್ ಸಂಗಮದ ಈ ಚಿತ್ರ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಹೇಳಿಕೇಳಿ ಪ್ರೇಮ್ಸ್ ಸಿನಿಮಾ ಅಂದ್ಮೇಲೆ ಹಾಡುಗಳ ಬಗ್ಗೆ ಹೊಸದಾಗಿ ಹೇಳೋದೇ ಬೇಡ. ಶಿವ ಶಿವ ಸಿಂಗಿಂಗ್ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇನ್ನೂ ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ ಹಾಡು ಕೂಡ ಸಖತ್ ಸೌಂಡ್ ಮಾಡ್ತಿದೆ. ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್,ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಗಸ್ಟ್ ಗೆ ಚಿತ್ರ ತೆರೆಗೆ ಬರಲಿದೆ.
ಡೆವಿಲ್ ʼದರ್ಶನʼ ಯಾವಾಗ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡೆವಿಲ್. ಸದ್ಯ ರಾಜಸ್ತಾನದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷವೇ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮೂಡಿ ಬರ್ತಿದೆ.
ಜೂನ್‌ನಲ್ಲಿ ಯುವ ಎಕ್ಕ
‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಜೂನ್ 6ರಂದು ತೆರೆಕಾಣಲಿದೆ. ಇದು ಯುವ ರಾಜ್‌ಕುಮಾರ್ ಎರಡನೇ ಸಿನಿಮಾವಾಗಿದ್ದು, ಭೂಗತ ಜಗತ್ತಿನ ಕಥೆಯನ್ನು ಸಿನಿಮಾ ಹೊಂದಿದೆ. ಯುವಗೆ ಜೋಡಿಯಾಗಿ ಸಂಪದ, ಸಂಜನಾ ಆನಂದ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪಿ.ಆರ್.ಕೆ.ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್ ಹಾಗೂ ಕೆ.ಆರ್.ಜಿ.ಸ್ಪೂಡಿಯೊಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಲಾಗುತ್ತಿದೆ.
ವಿಜಯ್ ʼಲ್ಯಾಂಡ್ ಲಾರ್ಡ್ʼ
ದುನಿಯಾ ವಿಜಯ್ ನಟನೆಯ 29ನೇ ಸಿನಿಮಾ ಲ್ಯಾಂಡ್ ಲಾರ್ಡ್. ‘ಕಾಟೇರ’ ಕಥೆಗಾರ ಜಡೇಶ್ ಕೆ.ಹಂಪಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೇ ಅಥವಾ ಜೂನ್‌ನಲ್ಲಿ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ..!’ ಎನ್ನುವ ಅಡಿಬರಹ ಈ ಸಿನಿಮಾಗಿದ್ದು, ವಿಜಯ್ ಅವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.