ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ದಾಖಲಿಸಿದೆ.
ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಶ್ರೀ ರಾಮಲಲ್ಲ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ!
ಐಪಿಎಲ್ 2025ರ ಋತುವಿನಲ್ಲಿ ಆರ್ಸಿಬಿ ಉತ್ತರ ಆರಂಭ ಪಡೆದುಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಂಡವು ಗಮನಾರ್ಹವಾಗಿ ಸುಧಾರಿಸಿದೆ ಎಂದು ಆರ್ಸಿಬಿ ಮಾಜಿ ಆಟಗಾರರೂ ಆದ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ.
ಸಿಎಸ್ಕೆ ವಿರುದ್ಧ ಆರ್ಸಿಬಿ 50 ರನ್ಗಳ ಅಂತರದ ಗೆಲುವು ಸಾಧಿಸಿದೆ. 2008 ರ ನಂತರ ಚೆನ್ನೈ ನೆಲದಲ್ಲಿ ಆರ್ಸಿಬಿ ಗೆಲುವು ದಾಖಲಿಸಿದೆ. ಈ ಬಗ್ಗೆ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಎಬಿಡಿ, ಆರ್ಸಿಬಿ ತಂಡವನ್ನು ಮೆಚ್ಚಿ ಮಾತನಾಡಿದ್ದಾರೆ.
ಹಿಂದಿನ ಋತುಗಳಿಗೆ ಹೋಲಿಸಿದರೆ ಆರ್ಸಿಬಿ ತಂಡದ ಸಮತೋಲನ 10 ಪಟ್ಟು ಉತ್ತಮವಾಗಿದೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. ಒಬ್ಬ ಆಟಗಾರನ ಸಾಧನೆ ಎಂಬುದು ಇಲ್ಲಿ ಕಾಣುತ್ತಿಲ್ಲ. ಒಟ್ಟಾರೆ, ತಂಡದ ಸಾಧನೆಯನ್ನು ಗುರುತಿಸಬಹುದು ಎಂದು ಹೇಳಿದ್ದಾರೆ.
ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ವೇಗಿ ಭುವನೇಶ್ವರ್ ಕುಮಾರ್ನನ್ನು ಕರೆತಂದ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ