ಗದಗ: ಬೆಂಕಿ ಅವಘಡ ಸಂಭವಿಸಿ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋದ ಘಟನೆ ಗದಗ ನಗರದ ಜವಳ ಗಲ್ಲಿ ಪ್ರದೇಶದಲ್ಲಿರುವ ಬಟ್ಟೆ ಅಂಗಡಿ ಹಾಗೂ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ನಡೆದಿದೆ. ಘಟನೆ ಪರಿಣಾಮ ಫ್ರಿಜ್, ವಾಶಿಂಗ್ ಮಶಿನ್,
ಸ್ಪೀಕರ್ ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಶಾರ್ಟ್ ಸಕ್ಯೂ೯ಟ್ ನಿಂದ ಬೆಂಕಿ ಹೊತ್ತಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ.
Ugadi 2025: ಇಂದು “ಯುಗಾದಿ” ಹಬ್ಬದ ಸಂಭ್ರಮ: ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!
ಉಮೇದಮಲ್ಲ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.