ಬೆಂಗಳೂರು : ತನ್ನ ಬ್ಯಾಗ್ನಲ್ಲಿ ಸ್ಫೋಟಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇರೆಗೆ ಹೋಟೆಲ್ನ ಕೆಲಸಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದರು, ಆರೋಪಿಯಿಂದ ಜಪ್ತಿ ಮಾಡಲಾದ ಕೆಂಪು ಬಣ್ಣದ ಬಾಲ್ ಆಕಾರದ ಸ್ಫೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಳೆದ ಒಂದು ವಾರದಿಂದಲೂ ಕೇಂದ್ರ ತನಿಖಾ ತಂಡಗಳಿಂದ ಅಬ್ದುಲ್ ರೆಹಮಾನ್ ವಿಚಾರಣೆ ನಡೆದಿದ್ದು,
ಅರಮನೆ ಮೈದಾನದ ಬಳಿಯೇ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದ ಆರೋಪಿ ಅಬ್ದುಲ್ಗೆ ಪ್ಯಾಲೇಸ್ ಗ್ರೌಂಡ್ನಲ್ಲಿ ಅನಾಮಿಕ ವ್ಯಕ್ತಿ ಸ್ಫೋಟಕ ಕೊಟ್ಟಿದ್ದು, ಸಿಗರೇಟ್ ಶಾಪ್ ಬಳಿ ಸ್ಫೋಟಕ ಇಡಲು ಹೇಳಿದ್ದಾಗಿ ಬಾಯ್ಬಿಟ್ಟಿದ್ದಾನೆ. ಒಂದೊಂದು ಬಾರಿ ಒಂದೊಂದು ಹೆಸರು ಹೇಳುತ್ತಿರುವ ಆರೋಪಿ, ಒಟ್ಟು ಮೂರು ಹೆಸರುಗಳನ್ನು ಹೇಳಿದ್ದಾನೆ.
Ugadi 2025: ಇಂದು “ಯುಗಾದಿ” ಹಬ್ಬದ ಸಂಭ್ರಮ: ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!
ರಾಜಣ್ಣ ಎಂಬಾತನೇ ಅರಮನೆ ಮೈದಾನದಿಂದ ಆಟೋದಲ್ಲಿ ಥಣಿಸಂದ್ರದ ಹೋಟೆಲ್ಗೆ ಹೋಗಿದ್ದಾಗಿ ಅಬ್ದುಲ್ ಮಾಹಿತಿ ನೀಡಿದ್ದು, ಆಟೋ ಚಾಲಕನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಆರೋಪಿ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಇಬ್ಬರು ಹೇಳಿದ್ದಾರೆ. ಸದ್ಯ ಅಬ್ದುಲ್ ರೆಹಮಾನ್ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಚುರುಕು ನಡೆಸಿದ್ದಾರೆ.