ಕಾವ್ಯಾ ಮಾರನ್, ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿತ ಹೆಸರು..ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ. ಎಸ್ ಆರ್ ಹೆಚ್ ಪಂದ್ಯದ ಸಮಯದಲ್ಲಿ ಕಾವ್ಯಾ ನೀಡುವ ಎಕ್ಸ್ ಪ್ರೆಶ್ ಗೆ ಕ್ರೀಡಾಭಿಮಾನಿಗಳಿಗೆ ಬಲು ಇಷ್ಟ..ತಮಿಳುನಾಡಿನ ಖ್ಯಾತ ಬ್ಯುಸಿನೆಸ್ ಮೆನ್ ಕಲಾನಿಧಿ ಮಾರನ್ ಪುತ್ರಿಯೇ ಈ ಕಾವ್ಯಾ ಮಾರಾನ್.
ತಂದೆ ಹಾದಿಯಲ್ಲಿ ಸಾಗುತ್ತಿರುವ ಕಾವ್ಯಾ ಉದ್ಯಮ ಕ್ಷೇತ್ರದಲ್ಲಿ ಛಾಪೂ ಮೂಡಿಸಿದ್ದಾರೆ. ಬರೋಬ್ಬರಿ 400 ಕೋಟಿ ಒಡೆತಿಯಾಗಿರುವ ಕಾವ್ಯಾ ಮಾರಾನ್ ಪ್ರೇಮಕಥೆಗಳು ಆಗಾಗಾ ಸುದ್ದಿ ಮನೆ ಅಂಗಳಕ್ಕೆ ಬರುತ್ತವೆ. ಕಾವ್ಯಾ ತಮಿಳಿನ ಖ್ಯಾತ ಸಂಗೀತ ನಿರ್ದೇಶಕನ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಚಿತ್ರರಂಗದ ರಾಕ್ ಸ್ಟಾರ್ ಅಂತಾನೇ ಖ್ಯಾತಿ ಪಡೆದಿರುವ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಸಂಥಿಂಗ್ ಸಂಥಿಂಗ್ ಇದೆ ಅನ್ನೋ ಮಾತಿದೆ. ಈ ಜೋಡಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರಾನ್ ಒಡೆತನದ ಸನ್ ಪಿಕ್ಚರ್ಸ್ ನಡಿ ಮೂಡಿಬಂದ ‘ತಿರುಚಿತ್ರಾಂಬಲಂ’, ‘ಬೀಸ್ಟ್’, ‘ಜೈಲರ್’ ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದು ಇದೇ ಅನಿರುದ್ಧ್. ಬರೀ ತಮಿಳು ಮಾತ್ರವಲ್ಲ ಅಟ್ಲಿ ನಿರ್ದೇಶನದ, ಶಾರುಖ್ ನಟನೆಯ ಜವಾನ್ ಚಿತ್ರಕ್ಕೂ ಟ್ಯೂನ್ ಹಾಕಿದ್ದು ಇದೇ ರಾಕ್ ಸ್ಟಾರ್. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸ್ರು ಮಾಡುತ್ತಿರುವ ಅನಿರುದ್ಧ್ ಹಾಗೂ ಸನ್ ರೈಸರ್ಸ್ ಮಾಲಕಿ ಕಾವ್ಯಾ ಪರಸ್ಪರ ಪ್ರೀತಿಸುತ್ತಿದ್ದಾರಂತೆ.
ಅನಿರುದ್ಧ್ ಮಾತ್ರವಲ್ಲ ರಿಷಬ್ ಪಂಥ್ ಹಾಗೂ ಅಭಿಷೇಕ್ ಶರ್ಮಾ ಜೊತೆಯೂ ಕಾವ್ಯಾ ಮಾರನ್ ಡೇಟಿಂಗ್ ಮ್ಯಾಟರ್ ಗುಲ್ಲೆದಿತ್ತು. ಆಗಾಗಾ ಕಾವ್ಯಾ ಬಗ್ಗೆ ಈ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಆಕೆ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ.