ತುಮಕೂರು: ರಾಜೇಂದ್ರ ಹತ್ಯೆಗೆ ಸುಪಾರಿ ಪ್ರಕರಣದಲ್ಲಿ ಇದೀಗ ಸುಪಾರಿ ಸಂಚಿನ ಇಂಚಿಂಚು ಮಾಹಿತಿಯ ಆಡಿಯ್ ಲಭ್ಯವಾಗಿದೆ. ಇದೇ ಆಡಿಯೋದಿಂದ ರಾಜೇಂದ್ರ ಅವರಿಗೆ ಸುಪಾರಿ ಸಂಚು ಗೊತ್ತಾಗಿದ್ದು. ರಾಜೇಂದ್ರ ಅವರು ದೂರಿನಲ್ಲಿ ಉಲ್ಲೇಖಿಸಿ ಪೆನ್ ಡ್ರೈವ್ ನಲ್ಲಿ ನೀಡಿದ್ದ ಆಡಿಯೋ ಲಭ್ಯವಾಗಿದ್ದು, ಚರ್ಚಗೆ ಗ್ರಾಸವಾಗಿದೆ.
ಈ ಆಡೀಯೋದಲ್ಲಿ ಮಹಿಳೆಯೊಬ್ಬಳು ರಾಜೇಂದ್ರ ಹತ್ಯೆಗೆ ಸುಪಾರಿ ಬಗ್ಗೆ ಆಡಿಯೋದಲ್ಲಿ ಇಂಚಿಂಚು ವಿವರಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಆಡಿಯೋ ಇದಾಗಿದ್ದು, ಪ್ರಕರಣದ ಎ1 ಆರೋಪಿ ಸೋಮನ ಪ್ಲಾನ್ ಬಗ್ಗೆ ಇಂಚಿಂಚು ವಿವರಿಸಿದ್ದಾಳೆ.
70 ಲಕ್ಷಕ್ಕೆ ಡೀಲ್, 5 ಲಕ್ಷ ಅಡ್ವಾನ್ಸ್ ; ರಾಜೇಂದ್ರ ಮೇಲೆ ಕೊಲೆಯತ್ನ ಕೇಸ್ನ ಸ್ಫೋಟಕ ಆಡಿಯೋ ರಹಸ್ಯ
ಪುಷ್ಪ ಎಂಬ ಮಹಿಳೆ ಆರೋಪಿ ಜೈಪುರ ಸೋಮನಿಗೆ ಪರಿಚಯಸ್ಥಳಾಗಿದ್ದು, ಆತ ರಾಜೇಂದ್ರರನ್ನ ಹತ್ಯೆ ಮಾಡಲು ಸುಪಾರಿ ಪಡೆದಿರೋದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದನು. ಆ ಬಳಿಕ ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದ ಪುಷ್ಪ, ಬಳಿಕ ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರರಿಗೆ ತಿಳಿಸಿದ್ದಾಳೆ.
ರಾಜೇಂದ್ರ ಗೆ ವಿಚಾರ ಮುಟ್ಟಿಸಲು ರಾಕಿ ಎನ್ನುವ ಹುಡುಗನನ್ನ ಬಳಸಿಕೊಂಡಿದ್ದು, ರಾಕಿ ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಬಳಿಕ ಈ ಆಡಿಯೋ ರಾಜೇಂದ್ರಗೆ ತಲುಪಿದೆ ಎನ್ನಲಾಗುತ್ತಿದೆ. ಆಡಿಯೋದಲ್ಲಿನ ಹತ್ಯೆಯ ಸಂಚಿನ ಬಗ್ಗೆ ತಿಳಿದು ಅಲರ್ಟ್ ಆಗಿರುವ ರಾಜೆಂದ್ರ ದೂರು ದಾಖಲಿಸಿದ್ದರು.
ಸದ್ಯ ಇದೇ ಆಡಿಯೋದಲ್ಲಿನ ಮಾಹಿತಿ ಬೆನ್ನತ್ತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಡಿಯೋದಲ್ಲಿ ಆರೋಪಿ ಸೋಮ,ಭರತ್,ಅಮಿತ್,ಗುಂಡಾ,ಯತೀಶ್ ಹೆಸರು ಉಲ್ಲೇಖವಾಗಿದ್ದು, ಈ ಐವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.