ಬೆಳಗಾವಿ : ಬೆಳಗಾವಿ ನಗರದಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದೆ. ರಂಜಾನ್ ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್ಗೆ ಹೋಗಿದ್ದಾಗ ಗಲಾಟೆಯಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿಯಿರುವ ಸಾಯಿ ಹೋಟೆಲ್ನಲ್ಲಿ ಘಟನೆ ನಡೆದಿದೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ ; ದರೋಡೆಕೋರನಿಗೆ ಗುಂಡೇಟು
ಇನ್ನೂ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್ನ ಬಾಗಿಲು ಮುಚ್ಚಿದ್ದಾರೆ.