ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಗೆಲುವು ದಾಖಲಿಸಿತು. ಆದರೆ, ಗೆಲುವಿನ ಹೊರತಾಗಿಯೂ, ತಮ್ಮ ಸ್ಕೋರ್ ಅನ್ನು ರಕ್ಷಿಸಿಕೊಳ್ಳುವಾಗ ನಿಧಾನಗತಿಯ ಓವರ್ ದರವನ್ನು ಕಾಯ್ದುಕೊಂಡಿದ್ದಕ್ಕಾಗಿ ಅವರ ನಾಯಕ ರಿಯಾನ್ ಪರಾಗ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಈ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್ ತಪ್ಪಿತಸ್ಥನೆಂದು ಸಾಭೀತಾದ ಎರಡನೇ ನಾಯಕ ರಿಯಾನ್ ಪರಾಗ್. ಅವರಿಗಿಂತ ಮೊದಲು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮವನ್ನು ಉಲ್ಲಂಘಿಸಿದಕ್ಕಾಗಿ 12 ಲಕ್ಷ ರೂಗಳನ್ನು ದಂಡ ಕಟ್ಟಿದ್ದಾರೆ. ನಿಧಾನಗತಿಯ ಓವರ್ ದರದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಐಪಿಎಲ್ ತಂಡದ ನಾಯಕರು ಪಾವತಿಸಬೇಕಾದ ಮೊತ್ತ ಇದು.
Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..!
ಐಪಿಎಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ನಿಧಾನಗತಿಯ ಓವರ್ ದರಕ್ಕೆ ಸಂಬಂಧಿಸಿದಂತೆ ರಿಯಾನ್ ಪರಾಗ್ ತಂಡದ ಮೊದಲ ತಪ್ಪು ಇದಾಗಿರುವುದರಿಂದ, ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.22 ರ ಅಡಿಯಲ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ರಿಯಾನ್ ಪರಾಗ್ಗಿಂತ ಮೊದಲು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲ್ಪಟ್ಟಿದ್ದರು. ಆ ಪಂದ್ಯದಲ್ಲಿ, ಒಂದು ಪಂದ್ಯದ ನಿಷೇಧವನ್ನು ಎದುರಿಸಿದ ನಂತರ ಅವರು ತಂಡಕ್ಕೆ ಮರಳಿದರು. ನಿಧಾನಗತಿಯ ಓವರ್ ರೇಟ್ ನಿಯಮವನ್ನು 3 ಬಾರಿ ಮುರಿದಕ್ಕಾಗಿ ಅವರ ಮೇಲೆ ಆ ನಿಷೇಧವನ್ನು ಹೇರಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಆ ನಿಯಮವನ್ನು ರದ್ದುಗೊಳಿಸಲಾಗಿದೆ.