ಮುಂಬೈನ ವಾಂಖೆಡೆಯಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ತವರಲ್ಲಿ ಟಾಸ್ ಗೆದ್ದಿರುವ ಮುಂಬೈ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಕೋಲ್ಕತ್ತ ಬ್ಯಾಟಿಂಗ್ ಮಾಡಲಿದೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇಯಿಂಗ್-11 ರಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಇಂದು ವಿಲ್ ಜ್ಯಾಕ್ಸ್ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದಲ್ಲದೆ, 23 ವರ್ಷದ ಅಶ್ವಿನಿ ಕುಮಾರ್ ಐಪಿಎಲ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಲವ್ ಫೆಲ್ಯೂರ್: ತಲೆ ಕೆಟ್ಟ ಹುಡುಗ ಮದುವೆಯಾಗಿದ್ದು ಯಾರನ್ನಾ ಗೊತ್ತಾ!? ಅಬ್ಬಾ ಯಾರೀ ಸುಂದರಿ!
ಮುಂಬೈ ತಂಡ ಈ ಸೀಸನ್ನಲ್ಲಿ ಮೊದಲ ಬಾರಿಗೆ ತನ್ನ ತವರು ನೆಲದಲ್ಲಿ ಆಡುತ್ತಿದ್ದು, ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಇದಕ್ಕೂ ಮೊದಲು ಆಡಿದ ಎರಡೂ ಪಂದ್ಯಗಳಲ್ಲಿ ಮುಂಬೈ ಸೋತಿದೆ. ಮತ್ತೊಂದೆಡೆ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೀನಾಯವಾಗಿ ಸೋತ ನಂತರ ಎರಡನೇ ಪಂದ್ಯದಲ್ಲಿ ಬಲವಾದ ಪುನರಾಗಮನವನ್ನು ಮಾಡಿತು. ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಋತುವಿನ ಮೊದಲ ಗೆಲುವು ದಾಖಲಿಸಿದ್ದು, ಈಗ ಮುಂಬೈನಲ್ಲಿಯೂ ಅದೇ ಜಯವನ್ನು ಮುಂದುವರಿಸಲು ಬಯಸುತ್ತಿದೆ.