ಬೆಂಗಳೂರು:- ಬಿಎಂಟಿಎಫ್‌ಗೆ ದೂರು ನೀಡಿದ್ರು ಅಂತಾ ಕಿಡಿಗೇಡಿಗಳು ಮಕ್ಕಳಿದ್ದ ಶಾಲಾ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಯಾವ ಬಟ್ಟೆ ಎಷ್ಟು ಬಾರಿ ಹಾಕಿದ ನಂತರ ತೊಳೆಯಬೇಕು ಗೊತ್ತಾ? ನೀವು ತಿಳಿಯಲೇಬೇಕಾದ ವಿಚಾರ!
ಘಟನೆ ಸಂಬಂಧ ಶಾಲಾ ಮಾಲೀಕ ಕಿರಣ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸ್ಥಳೀಯರು ಶಾಲಾ ಮುಂದಿನ ಬಿಬಿಎಂಪಿ ರಸ್ತೆಯಲ್ಲಿ ಅಡ್ಡಲಾಗಿ ಕಾಂಪೌಂಡ್ ಹಾಗು ಮನೆ ಕಟ್ಟಿದ್ರಂತೆ. ಈ ಬಗ್ಗೆ ಬಿಎಮ್ ಟಿ ಎಫ್ ಗೆ ಶಾಲಾ ಮಾಲೀಕ ದೂರು ಮಾಡಿದ್ದರು. ಹೀಗಾಗಿ ಬಿಎಂ ಟಿಎಫ್ ನಿಂದ ಅಕ್ರಮವಾಗಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ.
ಬಿಎಮ್ ಟಿಎಫ್ ಹಾಗು ಪೊಲೀಸ್ ಸಿಬ್ಬಂಧಿಗಳು ಹೋಗ್ತಿದ್ದಂತೆ ಕಿಡಿಗೇಡಿಗಳು, ಶಾಲೆ ಕಾಂಪೌಂಡ್ ಧ್ವಂಸ ಆರೋಪ ಕೇಳಿ ಬಂದಿದೆ. ದೂರು ಕೊಟ್ಟಿದ್ದಕ್ಕೆ ಕಿಡ್ಸ್ ಮ್ಯಾನ್ಸನ್ ಮೆಕಾನಿಕ್ ಶಾಲೆಯ ಕೌಂಪೌಂಡ್, ಕೆನೊಪಿ ಧ್ವಂಸ ಮಾಡಿದ್ದು, ಈ ಬಗ್ಗೆ ನವೀನ್ , ವಿಶ್ವನಾಥ್ , ಚಂದ್ರಶೇಖರ್ , ಚಂದ್ರು ಸೇರಿದಂತೆ ಹಲವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಆರೋಪಿಗಳನ್ನು ಸ್ಥಳೀಯ ಜಮೀನ್ದಾರರು ಎನ್ನಲಾಗಿದೆ. ಜೆಸಿಬಿ ತಂದು ಶಾಲಾ ಕಾಂಪೌಂಡ್ ಹಾಗು ಕೆನೊಪಿ ಧ್ವಂಸ ಮಾಡಿದ್ದಾರೆ.
ಶಾಲೆಯಲ್ಲಿ ನರ್ಸರಿ ಹಾಗು ಪ್ರೀ ನರ್ಸರಿ ಮಕ್ಕಳಿದ್ರಂತೆ. ಇನ್ನೂ ಘಟನೆಯಿಂದ ಪೋಷಕರು ಮತ್ತು ಮಕ್ಕಳು ಹೆದರಿದ್ದು, ಹೆಚ್.ಎ.ಎಲ್ ಪೊಲೀಸ್ರಿಂದ ತನಿಖೆ ಮುಂದುವರಿದಿದೆ