ಬಾಲಿವುಡ್ ಪವರ್‌ಫುಲ್ ಕಪಲ್ ಬೊಂಬೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಕಲಹ ಎದ್ದಿದೆ. ಈ ಜೋಡಿ ಡಿವೋರ್ಸ್ ಪಡೆಯುತ್ತಿದ್ದಾರೆ ಅನ್ನೋ ಬಿಸಿ ಬಿಸಿ ಬ್ರೇಕಿಂಗ್ ಕಳೆದ ಒಂದಷ್ಟು ತಿಂಗಳಿನಿಂದ ಹರಿದಾಡ್ತಿದೆ. ಈ ಚರ್ಚೆ ನಡುವೆಯೇ ಅಭಿ-ಐಸು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳೋದು ಅಪರೂಪವಾಗ್ಬಿಟ್ಟಿತ್ತು. ಆದ್ರೆ ಡಿವೋರ್ಸ್ ಸುದ್ದಿ ಗುಲ್ಲಿನ ನಡುವೆ ಬಾಲಿವುಡ್ ಈ ಜೋಡಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಡಿವೋರ್ಸ್ ಅಂದವರಿಗೆಲ್ಲಾ ಬಾಯಿ ಮುಚ್ಚಿಕೊಳ್ಳುವಂತೆ ಮಾಡಿದ್ದಾರೆ.
ಇತ್ತೀಚೆಗೆ ಫ್ಯಾಮಿಲಿ ಮದುವೆಯೊಂದರಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ., ಮಗಳು ಆರಾಧ್ಯ ಕೂಡ ಅಪ್ಪ ಅಮ್ಮನಿಗೆ ಸಾಥ್ ಕೊಟ್ಟಿದ್ದಾರೆ. ಪುಣೆಯಲ್ಲಿ ನಡೆದ ಮದುವೆಯಲ್ಲಿ ಸಮಾರಂಭದಲ್ಲಿ ‘ಕಜ್ರಾ ರೇ’ ಹಾಡಿಗೆ ಐಸು ಹಾಗೂ ಅಭಿ ಕುಣಿದು ಕುಪ್ಪಳಿಸಿದ್ದಾರೆ. ಮಗಳು ಆರಾಧ್ಯ ಕೂಡ ಅಪ್ಪ ಅಮ್ಮನ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಡಿವೋರ್ಸ್ ಅಂತಿದ್ದವರಿಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.
ಏಪ್ರಿಲ್ 20, 2007 ರಂದು ಐಶ್ವರ್ಯಾ ಮತ್ತು ಅಭಿಷೇಕ್ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದರು. ನಾಲ್ಕು ವರ್ಷಗಳ ದಾಂಪತ್ಯದ ನಂತರ, ಆರಾಧ್ಯಾ ಜನಿಸಿದ್ದರು. ವಿಭಿನ್ನ ಚಿತ್ರಗಳ ಮೂಲಕ ಅಭಿಷೇಕ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅತ್ತ ಐಶ್ವರ್ಯಾ ರೈ ಅವರು ಮದುವೆ ಚಿತ್ರರಂಗದಲ್ಲಿ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಇತ್ತೀಚೆಗೆ ಬಂದ ತಮಿಳಿನ ‘ಪೊನ್ನಿಯನ್ ಸೆಲ್ವನ್ 1’ ಮತ್ತು ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.