2025ರ IPL ಪಂದ್ಯದಲ್ಲಿ ಆರ್ಸಿಬಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಡಲು ಸಜ್ಜಾಗಿದೆ. ಅದರಂತೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು-ಗುಜರಾತ್ ತಂಡ ಮುಖಾಮುಖಿಯಾಗಲಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹು ದೊಡ್ಡದು: ಸಿಎಂ ಸಿದ್ದರಾಮಯ್ಯ
ಮೊದಲ ವಾರದ ನಂತರ, ಆರ್ಸಿಬಿ ಈ ಬಾರಿ ಐಪಿಎಲ್ ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿದೆ. ಹರಾಜಿನ ನಂತರ ಆರ್ಸಿಬಿ ಅತ್ಯಂತ ದುರ್ಬಲ ತಂಡ ಎಂದು ಕ್ರಿಕೆಟ್ ಪಂಡಿತರು ಹೇಳಿದ್ರು. ಆದ್ರೆ ಆರ್ಸಿಬಿ ಆಡಿದ 2 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಇಂದು ನಡೆಯಲಿರುವ ಮೂರನೇ ಪಂದ್ಯ ಕೂಡ ಆರ್ಸಿಬಿಗೆ ಬಹಳ ವಿಶೇಷ. ಇವತ್ತು ಕೂಡ ಗೆದ್ದು ಬೀಗೋ ನಿರೀಕ್ಷೆಯಲ್ಲಿದೆ ಆರ್ಸಿಬಿ ಅಂದ್ರೆ ತಪ್ಪಾಗಲ್ಲ. ಹೋಮ್ ಗ್ರೌಂಡ್ನಲ್ಲಿ ಮೊದಲ ಪಂದ್ಯ ಆಡ್ತಿರೋ ಆರ್ಸಿಬಿ ಇವತ್ತು ಪಕ್ಕಾ ಬಿಗ್ ಸ್ಕೋರ್ ಮಾಡಬೇಕು ಅಂತಿದ್ದಾರೆ ಆರ್ಸಿಬಿ ಫ್ಯಾನ್ಸ್. ಇನ್ನೂ ಕಳೆದೆರಡು ಪಂದ್ಯಗಳಲ್ಲೂ ಕೊಹ್ಲಿ, ಸಾಲ್ಟ್ ಇಬ್ಬರು ಉತ್ತಮವಾಗಿ ಆಡಿದ್ದಾರೆ. ಅದ್ರಲ್ಲೂ ಬೆಂಗಳೂರು ಅಂದ್ರೆ ಕೊಹ್ಲಿ ಬೌಲರ್ಸ್ಗಳನ್ನು ಬಡಿದು ಬಾಯಿಗೆ ಹಾಕೋತಾರೆ ಅಂದ್ರೆ ತಪ್ಪಾಗಲ್ಲ. ಆದ್ರೆ ಇವತ್ತು ಕೊಹ್ಲಿ, ಸಾಲ್ಟ್ ಉತ್ತಮವಾಗಿ ಆಡ್ತಾರೆ ನಿಜ. ಅವರಿಗಿಂತ ಹೆಚ್ಚು ಉತ್ತಮವಾಗಿ ಈ ಆರ್ಸಿಬಿ ಹುಲಿ ಆಡುತ್ತೆ ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಹೌದು, ಆರ್ಸಿಬಿಯ ನಾಯಕ ರಜತ್ ಪಟಿದಾರ್ ಕಳೆದ ಪಂದ್ಯದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ರು. ಇವತ್ತು ಕೂಡ ಅಖಾಡದಲ್ಲಿ ಹೆಚ್ಚು ಆರ್ಭಟಿಸೋದು ಇವ್ರೇ ಅಂತಿದ್ದಾರೆ ಫ್ಯಾನ್ಸ್. ಚೆನ್ನೈ ಗ್ರೌಂಡ್ನಲ್ಲೇ ಹಾಗೇ ಹೊಡೆದ್ರು. ಈಗ ಬೆಂಗಳೂರು ಗ್ರೌಂಡ್. ಅದರಲ್ಲೂ ಹೋಮ್ ಗ್ರೌಂಡ್. ನಾಯಕನಾದ ಮೇಲೆ ಹೋಮ್ ಗ್ರೌಂಡ್ನಲ್ಲಿ ಮೊದಲ ಪಂದ್ಯ ಆಡ್ತಿದ್ದಾರೆ. ಆರ್ಸಿಬಿ ಫ್ಯಾನ್ಸ್ ಕೂಡ ರಜತ್ ಪಟಿದಾರ್ ಮೇಲೆ ಬೆಟ್ಟದ್ದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.