ರಾಜ್ಯದಲ್ಲಿ ಬೇಸಿಗೆ ಆರಂಭವಾಗಿ ತಿಂಗಳು ಕಳೆಯುತ್ತಿದ್ದು, ಈ ವರ್ಷದ ಬಿಸಿಲಿನ ತಾಪಮಾನವು ಕಳೆದ ವರ್ಷಗಳಿಗಿಂತ ಹೆಚ್ಚು ತೀವ್ರವಾಗಿ ಸುಡುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಸೂರ್ಯನ ಶಾಖವು ತಾಳಲಾರದಷ್ಟು ತೀವ್ರವಾಗಿದ್ದು, ಮನೆಯಿಂದ ಹೊರಗೆ ಬರುವುದೇ ಕಷ್ಟವಾಗುತ್ತಿದೆ.
GT Vs RCB: ಗುಜರಾತ್- ಆರ್ಸಿಬಿ ಪಂದ್ಯಕ್ಕೆ ಕ್ಷಣಗಣನೆ- ಬೆಂಗಳೂರು ತಂಡದಲ್ಲಿ ಇವತ್ತು ಅಬ್ಬರಿಸೋದು ಈ ಹುಲಿ!
ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು, ದೇಹ ತಂಪಾಗಿರಿಸಲು, ದಾಹ ತೀರಿಸಿಕೊಳ್ಳಲು ಹೆಚ್ಚಿನವರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಸಿಕ್ಕ ಕೋಲ್ಡ್ ಡ್ರಿಂಕ್ಸ್ ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರವಾದ ರಿಫ್ರೆಶಿಂಗ್ ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವ ಮೂಲಕ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿಯೇ ನಾವು ನಿಮಗೆ ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಆರೋಗ್ಯಕರ ಪಾನೀಯ ರೆಸಿಪಿಯನ್ನು ಹೊತ್ತು ತಂದಿದ್ದೇವೆ. ಅದುವೇ ಕೇರಳದ ಸ್ಪೆಷಲ್ ಎಳನೀರು ಕುಲುಕ್ಕಿ ಶರ್ಬತ್.
ಕುಲುಕ್ಕಿ ಕೇರಳದ ತಂಪು ಪಾನೀಯವಾಗಿದೆ. ಕಿತ್ತಳೆ ಹಣ್ಣು, ಮಾವಿನ ಹಣ್ಣು, ನಿಂಬೆ ಇತ್ಯಾದಿ ಹಣ್ಣುಗಳಿಂದ ಈ ಕುಲುಕ್ಕಿ ಶರ್ಬತ್ ತಯಾರಿಸಬಹುದು. ಅದೇ ರೀತಿ ಎಳನೀರನ್ನು ಕೂಡಾ ಬಳಸಿ ರಿಫ್ರೆಶಿಂಗ್ ಕುಲುಕ್ಕಿ ಶರ್ಬತ್ ತಯಾರಿಸಬಹುದು. ಬೇಸಿಗೆಯ ದಾಹ ನೀಗಿಸಲು ಸಹಕಾರಿಯಾದ ಎಳನೀರು ಕುಲುಕ್ಕಿ ಶರ್ಬತ್ ರೆಸಿಪಿ ಇಲ್ಲಿದೆ:
ಬೇಕಾಗುವ ಸಾಮಾಗ್ರಿಗಳು:
* ಎಳನೀರು
* ನಿಂಬೆ ರಸ
* ಜೇನುತುಪ್ಪ ಅಥವಾ ಸಕ್ಕರೆ
* ಒಂದು ಹಸಿ ಮೆಣಸಿನಕಾಯಿ (ಐಚ್ಛಿಕ)
* ಉಪ್ಪು ಅಥವಾ ಬ್ಲ್ಯಾಕ್ ಸಾಲ್ಟ್
* ಐಸ್ ಕ್ಯೂಬ್
* ನೆನೆಸಿಟ್ಟ ಸಬ್ಜಾ ಬೀಜಗಳು
ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ತಾಜಾ ಎಳನೀರನ್ನು ಸುರಿದು ಅದಕ್ಕೆ ಭಾಗ ಮಾಡಿದ ಹಸಿ ಮೆಣಸಿನಕಾಯಿಯನ್ನು ಹಾಕಿ. ನಂತರ ಸ್ವಲ್ಪ ಉಪ್ಪು, ಸಿಹಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ, ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿ ಕೊನೆಗೆ ಒಂದು ಲೋಟಕ್ಕೆ ನೆನೆಸಿಟ್ಟ ಸಬ್ಜಾ ಬೀಜ, ಐಸ್ ಕ್ಯೂಬ್ ಹಾಗೂ ಮೊದಲೇ ತಯಾರಿಸಿಟ್ಟ ಎಳನೀರಿನ ಮಿಶ್ರಣವನ್ನು ಸೇರಿಸಿದರೆ ಕುಡಿಯಲು ಸಿದ್ಧ ಎಳನೀರು ಕುಲುಕ್ಕಿ ಶರ್ಬತ್.
ಎಳನೀರು ಕುಲುಕ್ಕಿ ಶರ್ಬತ್ ಆರೋಗ್ಯಕರವೇ?
ಖಂಡಿತವಾಗಿಯೂ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಇದರಲ್ಲಿರುವ ಎಳನೀರು ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಸಾಕಷ್ಟು ಜಲಸಂಚಯನವನ್ನು (ಹೈಡ್ರೇಶನ್) ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಸಬ್ಜಾ ಬೀಜಗಳು ಫೈಬರ್ ಮತ್ತು ಸಸ್ಯ ಆಧಾರಿತ ಒಮೆಗಾ-3 ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.