ರಾಯಚೂರು:- ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ದೇವದುರ್ಗ ಶಾಸಕಿ ಪಾದಯಾತ್ರೆ ಕೈಗೊಂಡಿದ್ದಾರೆ. ಆದರೆ ಪಾದಯಾತ್ರೆ ವೇಳೆ ಶಾಸಕಿ ಜಿ.ಕರೆಮ್ಮ ನಾಯಕ ಅವರು ಅಸ್ವಸ್ಥಗೊಂಡು ನಿತ್ರಾಣಗೊಂಡಿದ್ದಾರೆ.
Breaking News: ಶಾಸಕಿ ಕರೆಮ್ಮ ನಾಯಕ್ ಪುತ್ರಿ ಕಾರು ಬೈಕ್ ಗೆ ಡಿಕ್ಕಿ: ಸವಾರ ಗಂಭೀರ!
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿನಿಂದ ರಾಯಚೂರು ವರೆಗೂ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಈ ವೇಳೆ ಬಿರು ಬಿಸಿಲಿನಲ್ಲಿ ಬೇಸಿಗೆ ತಾಪಕ್ಕೆ ಶಾಸಕಿ ಕರೆಮ್ಮಾ ನಾಯಕ್ ನಿಂತ್ರಾಣಗೊಂಡಿದ್ದಾರೆ.
ಕೂಡಲೇ ಶಾಸಕಿಗೆ ಆ್ಯಂಬುಲೇಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಕಲ್ಮಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಕಾಲ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆ ಕರೆಮ್ಮ ನಾಯಕ ಅವರು ಮುಂದುವರಿಸಿದರು.