ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜೀವನದ ಒಂದು ಭಾಗವಾಗಿದೆ. ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿಯೇ ಕಳೆಯುತ್ತಾನೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ಸಾಮಾನ್ಯವಾಗಿಬಿಟ್ಟಿದೆ.
Raw Mangoes: ಬೇಸಿಗೆಯಲ್ಲಿ ಹಸಿ ಮಾವಿನ ಕಾಯಿ ತಿನ್ನುವ ಪ್ರಯೋಜನಗಳೇನು..? ಮಧುಮೇಹಿಗಳು ತಿನ್ನಬಹುದೇ?
ಕೆಲವರು ಕೆಲಸ ಮಾಡುತ್ತಿದ್ದೀರೋ ಇಲ್ಲವೋ ಆದರೆ ಪದೇ ಪದೇ ಮೊಬೈಲ್ ಫೋನ್ ನೋಡುತ್ತಲೇ ಇರುತ್ತಾರೆ. ದಿನಕ್ಕೆ ಹಲವಾರು ಬಾರಿ ಫೋನ್ ಅನ್ನು ನೋಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ.
ಮೊಬೈಲ್ ಫೋನ್ ಈಗ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಪರಿಸ್ಥಿತಿ ಬಂದು ತಲುಪಿದೆ. ಕಾಲ ಕ್ರಮೇಣ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಮೊಬೈಲ್ ಬಳಕೆ ಪ್ರತಿಯೊಬ್ಬರನ್ನು ಮೊಬೈಲ್ ಅಡಿಕ್ಷನ್ಗೆ ದೂಡಿದೆ. ಹೀಗಿರುವಾಗ ನಿಮಗೆ ಮೊಬೈಲ್ ಬಗ್ಗೆ ಎಷ್ಟು ಗೊತ್ತು? ಮೊಬೈಲ್ ಬಳಸುತ್ತೀರಾ ನಿಜ. ಆದ್ರೆ ಮೊಬೈಲ್. ಪದದ ಪೂರ್ಣ ಅರ್ಥ ತಿಳಿದಿದ್ಯಾ? ಇಲ್ಲಿ ತಿಳಿದುಕೊಳ್ಳಿ.
ಮೊಬೈಲ್ ಫೋನ್ನ ಇತಿಹಾಸವು ಸುಮಾರು ಐದು ದಶಕಗಳ ಹಿಂದಿನಿಂದ ಪ್ರಾರಂಭವಾಗಿ, ಈಗಿನ ಟಚ್ಸ್ಕ್ರೀನ್ ಆಧಾರಿತ ಸ್ಮಾರ್ಟ್ಫೋನ್ಗಳ ಯುಗಕ್ಕೆ ಬಂದು ತಲುಪಿದೆ. ಆದರೆ, ಮೊಬೈಲ್ಗೆ ಪೂರ್ಣ ರೂಪ ಇದೆ ಎಂದು ನಿಮಗೆ ತಿಳಿದರೆ ಆಶ್ಚರ್ಯವಾಗ್ತೀರಿ. MOBILE ಎಂಬ ಪದವು ಮೊಬೈಲ್ ಫೋನ್ಗಳನ್ನು ಸೂಚಿಸುತ್ತದೆ. ಆದರೂ ಅದರ ಪೂರ್ಣ ಅರ್ಥ ಬೇರೆನೇ ಇದೆ.
ಹೆಚ್ಚು ಅವಲಂಬಿತವಾಗಿರುವ ಮೊಬೈಲ್ ಫೋನ್ ಬಗ್ಗೆ ಹೆಚ್ಚಿನ ಜನರಿಗೆ ಕೆಲವು ಮಾಹಿತಿಗಳು ತಿಳಿದಿಲ್ಲ. ಉದಾಹರಣೆಗೆ, MOBILE ಪದದ ಪೂರ್ಣ ರೂಪ ಅಥವಾ ಪೂರ್ಣ ಹೆಸರು ಏನೆಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಯಾಕಂದರೆ ಎಲ್ಲರಿಗೂ ಮೊಬೈಲ್, ಫೋನ್ ಎಂದು ಕರೆಯುವುದೇ ಅಭ್ಯಾಸ. ಹೀಗಾಗಿ ಇದೇ ಇದರ ಪೂರ್ಣ ಹೆಸರು ಎಂದು ತಿಳಿದುಕೊಂಡಿರುತ್ತಾರೆ. ಅಲ್ಲದೇ MOBILEಗೂ ಪೂರ್ಣ ರೂಪ ಇದೆ ಎಂಬುದನ್ನು ತಿಳಿದುಕೊಳ್ಳಿ.
ಮೊಬೈಲ್ ಎಂಬ ಇಂಗ್ಲಿಷ್ ಪದವು “MOBILE” ನಿಂದ ನೇರವಾಗಿ ಬಂದಿರುವುದರಿಂದ, ಇದು ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನವನ್ನು ಸೂಚಿಸುತ್ತದೆ. ಇದಕ್ಕೆ ಅಧಿಕೃತವವಾಗಿ ಪೂರ್ಣ ರೂಪವಿಲ್ಲ. ಆದರೂ MOBILE ಪದದ ಪೂರ್ಣ ರೂಪ Modified Operation Byte Integration limited energy (ಮಾರ್ಪಡಿಸಿದ ಆಪರೇಷನ್ ಬೈಟ್ ಇಂಟಿಗ್ರೇಷನ್ ಲಿಮಿಟೆಡ್ ಎನರ್ಜಿ) ಎಂದು.
MOBILE ಎಂದರೆ ಮೊಬೈಲ್ ಅಥವಾ ಪೋರ್ಟಬಲ್ ಎಂದರ್ಥ. ಇದು ನಾವು ಎಲ್ಲೇ ಇದ್ದರೂ ಯಾವಾಗಲೂ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಅದಾಗ್ಯೂ, ಮೊಬೈಲ್ ಅನ್ನು ಇಂಟರ್ನೆಟ್ನಲ್ಲಿ ಕೆಲವು ಸಣ್ಣ ರೂಪಗಳಾಗಿ ವಿವಿಧ ರೀತಿಯಲ್ಲಿ ಡಿಕೋಡ್ ಮಾಡಲಾಗಿದೆ.
ನೀವು ಮೊಬೈಲ್ ಫೋನ್ಗಳ ಇತಿಹಾಸವನ್ನು ನೋಡಿದರೆ 1973ರಲ್ಲಿ, ಮೋಟರೋಲಾ ಕಂಪನಿಯ ಇಂಜಿನಿಯರ್ ಮಾರ್ಟಿನ್ ಕೂಪರ್ ಮೊದಲ ಮೊಬೈಲ್ ಕರೆ ಮಾಡಿದರು. ಅವರು ತಯಾರಿಸಿದ ಮೊಬೈಲ್ ಹ್ಯಾಂಡ್ಸೆಟ್ Motorola DynaTAC 8000X ಆಗಿತ್ತು, ಇದನ್ನು 1983ರಲ್ಲಿ ವಾಣಿಜ್ಯಗತ ಮಾಡಲಾಯಿತು. 2007ರಲ್ಲಿ ಆಪಲ್ ತನ್ನ ಮೊದಲ ಐಫೋನ್ ಬಿಡುಗಡೆ ಮಾಡಿದಾಗ, ಮೊಬೈಲ್ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿಯಾಗಿತ್ತು. ನಂತರ, ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ನ ಆವಿಷ್ಕಾರದಿಂದ, ಹಲವಾರು ಬ್ರಾಂಡ್ಗಳು ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಪ್ರವೇಶಿಸಿದವು.