ಕಾಂತಾರ-1 ಸಿನಿಮಾಗಾಗಿ ಅಖಂಡ ಸಿನಿಮಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ಅಖಾಡಕ್ಕೆ ಇಳಿಸಲು ಕಾಂತಾರ ಸಾರಥಿ ಹಾಗೂ ಅಧಿಪತಿ ರಿಷಬ್ ಶೆಟ್ಟಿ ಬಿಡುವಿಲ್ಲದೇ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಕಾಂತಾರ ಪ್ರೀಕ್ವೆಲ್ ಚಿತ್ರದ ಬಹುತೇಕ ಮೇಜರ್ ದೃಶ್ಯಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಿನಿಮಾ ಬಗ್ಗೆ ಸಣ್ಣದೊಂದು ಅಪ್ ಡೇಟ್ ಕೂಡ ಚಿತ್ರತಂಡ ರಿವೀಲ್ ಮಾಡಿಲ್ಲ. ಯಾರ್ ಕಾಂತಾರ 1 ಭಾಗವಾಗಿದ್ದಾರೆ ಅನ್ನೋದು ಟಾಪ್ ಸೀಕ್ರೆಟ್ ಆಗಿಯೇ ಉಳಿದೆ. ಈ ಮಧ್ಯೆ ಅಂದುಕೊಂಡ ಟೈಂನಲ್ಲಿ ಕಾಂತಾರಾ ರಿಲೀಸ್ ಆಗಲ್ಲ.. ಬಿಡುಗಡೆ ಲೇಟ್ ಆಗಲಿದೆ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ಚಿತ್ರತಂಡಕ್ಕೆ ಈ ಗಾಳಿಸುದ್ದಿಗೆ ಗುನ್ ಹೊಡೆದಿದೆ.
ಕಾಂತಾರ 1 ಬಿಡುಗಡೆ ಬಗ್ಗೆ ಹಬ್ಬಿರುವ ಎಲ್ಲಾ ಅಂತೆ ಕಂತೆಗಳಿಗೂ ಕಾಂತಾರಾ ಟೀಂ ಫುಲ್ ಸ್ಟಾಪ್ ಹಾಕಿದೆ.. ಈ ಮೊದಲೇ ಅನೌನ್ಸ್ ಮಾಡಿರುವಂತೆ ಅಕ್ಟೋಬರ್ 2 ರಂದು ಬಿಡುಗಡೆ ಮಾಡೇ ಮಾಡ್ತೀವೆ ಎಂದು ಚಿತ್ರತಂಡ ಹೇಳಿದೆ. ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂದುಕೊಂಡ ದಿನಾಂಕದಂದೂ ಚಿತ್ರವನ್ನು ತೆರೆಗೆ ತರಲಿದೆ ಕಾಂತಾರ ಟೀಂ. ಇನ್ನು ಹೊಂಬಾಳೆ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಕಾಂತಾರ ಚಾಪ್ಟರ್ 1ಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ನಾಯಕನಾಗಿ ನಟಿಸುತ್ತಿದ್ದಾರೆ. ಇದು ಬೆಳಕಲ್ಲ ದರ್ಶನ ಎನ್ನುವ ಮೂಲಕ ಕದಂಬ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ.