ಬೆಂಗಳೂರು: ಬಿಜೆಪಿಯಿಂದ ಉಚ್ಛಾಟಬೆ ಮಾಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಿರುವ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್, ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಸಿಗೋದಿಲ್ಲವೋ ಅಲ್ಲಿವರೆಗೆ ನಾನು ಬಿಜೆಪಿಗೆ ಹೋಗೊಲ್ಲ ಅಂತ ಶಪಥ ಮಾಡಿದ್ದಾರೆ.
ವಿಜಯೇಂದ್ರ ಅವರನ್ನ ಇಟ್ಟುಕೊಂಡು ಯತ್ನಾಳ್ ರನ್ನು ಬಿಜೆಪಿಗೆ ತೆಗೆದುಕೊಳ್ಳಲು ಆಗಲ್ಲ.
ಆದರೆ ಯತ್ನಾಳ್ ವಾಪಸ್ ಬಿಜೆಪಿಗೆ ತರಲು ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಜೊತೆ ಮಾತುಕತೆ ಮಾಡಿಲ್ಲ. ಆದರೆ, ರಮೇಶ್ ಜಾರಕಿಹೋಳಿ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಫಡ್ನವಿಸ್ ಭೇಟಿಯಾಗಿದ್ದು. ನನ್ನ ಸಲುವಾಗಿ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ. ಯಾಕೆಂದರೆ 6 ವರ್ಷ ಹೊರಗೆ ಹಾಕಿದ್ದಾರೆ. ಮಾಧ್ಯಮಗಳ ಯತ್ನಾಳ್ ಹಿಂದೆ ಸರಿದ್ರು ಅಂತ ವಿಜಯೇಂದ್ರ ಪರ ಹೊಡೆಯಬೇಡಿ. ಮಾಧ್ಯಮಗಳು ಸುಮ್ಮನೆ ಚರ್ಚೆ ಮಾಡಿ ಟೈಂ ವೇಸ್ಟ್ ಮಾಡಬೇಡಿ. ರೈತರು, ನೀರಾವರಿ, ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.
ಯತ್ನಾಳ್ ಪಕ್ಷ ಕಟ್ಟೋ ಬಗ್ಗೆ ಯಾಕೆ ಚರ್ಚೆ ಮಾಡ್ತೀರಾ ಎಂಬ ಪ್ರಶ್ನೆಗೆ ನಾನು ಜಿರೋ ಆಗೋಕೆ ತಯಾರು ಇದ್ದೀನಿ. ಮಾಧ್ಯಮಗಳಿಗೆ ಯಾಕೆ ಚಿಂತೆ. ಮಾಧ್ಯಮಗಳಿಗೆ ಫೀಡ್ ಮಾಡೋರು ಜಾಸ್ತಿ ಇದ್ದಾರೆ. ಯಾರ್ ಸುದ್ದಿ ಮಾಡೋರಿಗೆ ಫೀಡ್ ಮುಟ್ಟುತ್ತೆ ಎಂದು ಲೇವಡಿ ಮಾಡಿದ್ದಾರೆ.