ಬೆಂಗಳೂರು:- ರಾಯಚೂರು ಶಾಸಕರಿಂದ ಪೋನ್ ಟ್ಯಾಪ್ ಆರೋಪ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ಬಗ್ಗೆ ನಾನು ಎಸ್ಪಿ ಅವರಿಗೆ ಮಾತಾಡುತ್ತೇನೆ. ಆ ಭಾಗದ ಐಜಿ, ಡಿಜಿಗೂ ಮಾತಾಡುತ್ತೇನೆ. ಅಂತಹ ಘಟನೆ ನಡೆದಿದ್ರೆ, ಯಾವ ಕಾರಣಕ್ಕೆ ನಡೆದಿದೆ ಅನ್ನೋದನ್ನ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ವಕ್ಫ ಬಿಲ್ ಪಾಸ್ ವಿಚಾರವಾಗಿ ಮಾತನಾಡಿ, ಅವರಿಗೆ ಮೆಜಾರಿಟಿ ಇದೆ, ರಾಜಕೀಯ ಕಾರಣಕ್ಕೆ ಅದು ಆಗಿದೆ. ನಾನು ನಿನ್ನೆಯೇ ಹೇಳಿಕೆ ನೀಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಅಂತಹದ್ದೇನಾದರೂ ಆಗಿದ್ರೆ ರಾಜೀನಾಮೆ ಕೊಡ್ತಿನಿ ಎಂದಿದ್ದಾರೆ. ನಾಗಾವರದಲ್ಲಿ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತಾರೆ. ವಾಟ್ಸಪ್ ನಲ್ಲಿ ಬಂದಿರೋದ್ರಲ್ಲಿ ಸತ್ಯ ಇರಲ್ಲ. ಅದರ ಬಗ್ಗೆ ತನಿಖೆ ಮಾಡುತ್ತೇವೆ. ತನಿಖೆ ಸಂದರ್ಭದಲ್ಲಿ ಎಲ್ಲವೂ ಸತ್ಯ ಹೊರಗೆ ಬರುತ್ತದೆ. ತನಿಖೆಯಿಂದ ಸತ್ಯಾಸತ್ಯತೆ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಹೆಸರು ಸೂಚನೆ ನೀಡಿದ್ರಾ ಎಂಬ ವಿಚಾರವಾಗಿ ಮಾತನಾಡಿ, ಅಧ್ಯಕ್ಷರು, ಸಿಎಂ ದೆಹಲಿಗೆ ಹೋಗಿದ್ದಾರೆ. ಅವರು ಅದರ ಬಗ್ಗೆ ಚರ್ಚೆ ಮಾಡಿದ್ದಾರಾ, ಬಿಟ್ಟಿದ್ದಾರಾ ಗೊತ್ತಿಲ್ಲ. ಅಧ್ಯಕ್ಷರು ಇದ್ದಾಗ ನಮ್ಮ ಸಲಹೆ ಸ್ವೀಕಾರ ಮಾಡಿದ್ರು. ಆ ರೀತಿಯ ಮಾತುಗಳ ಏನಿಲ್ಲ. ಅಧ್ಯಕ್ಷರು ಸಿದ್ದರಾಮಯ್ಯ ಅವರು ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಯಾವಾಗಲೂ ಒಂದೇ ತರಹ ಇದ್ದೇನೆ. ಗ್ರಾಫ್ ಮೇಲೆ ಕೆಳಗೆ ಅಂತ ಇಲ್ಲ ಎಂದರು.