ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು,ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಿದೆ. ಈ ಮೂಲಕ ಯೆಲ್ಲೋ ಲೈನ್ ಮೆಟ್ರೋಗಾಗಿ ಕಾಯುತ್ತಿರುವವರಿಗಾಗಿ ಇದೀಗ ಬಿಎಂಆರ್ಸಿಎಲ್ ಗುಡ್ನ್ಯೂಸ್ ನೀಡಿದ್ದು, ಇದೇ ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ತಿಳಿಸಿದೆ.
ಕದ್ದಳು ಮನಸನ್ನಾ..ಅವಳಂತಾ ಚೆಲುವೆನಾ..ರಮ್ಯಾ ಫೋಟೋಗೆ ಸಮಂತಾ ಮೆಚ್ಚುಗೆ!
ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ಹೇಳಿದ್ದ ದಿನಾಂಕದಿಂದ ಮುಂದೂಡಿಕೆಯಾಗಿದ್ದು, ಜನ ರೋಸಿ ಹೋಗಿದ್ದರು. ಈ ಮಧ್ಯೆ ಆದಷ್ಟು ಬೇಗ ಮಾರ್ಗ ಓಪನ್ ಮಾಡಬೇಕು ಎಂದು ಬಿಎಂಆರ್ಸಿಎಲ್ ತೀವ್ರಗತಿಯಲ್ಲಿ ಕೆಲಸ ಆರಂಭಿಸಿದೆ.
ಈ ಮಾರ್ಗದಲ್ಲಿ ಡ್ರೈವರ್ ಲೈಸ್ ಮೆಟ್ರೋಗಳು ಓಡಾಡಲಿದ್ದು. ಟ್ರೈನ್ಗಳ ಬರುವಿಕೆ ತಡವಾಗಿದ್ದ ಕಾರಣದಿಂದಲೇ ಪ್ರಯಾಣ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಸದ್ಯ ತಮ್ಮ ಬಳಿ ಇರುವ ಎರಡು ರೈಲುಗಳಿಗೆ, ಶೀಘ್ರದಲ್ಲೇ ಇನ್ನೆರೆಡು ರೈಲು ಸೇರಿಸಿ ಮಾರ್ಗವನ್ನು ಸಂಚಾರ ಮುಕ್ತ ಮಾಡಲು ತಯಾರಿ ಶುರು ಮಾಡಿದೆ.
ಇದೇ ತಿಂಗಳ ಅಂತ್ಯಕ್ಕೆ ಒಂದು ರೈಲು ಬಿಎಂಆರ್ಸಿಎಲ್ ಕೈ ಸೇರಲಿದೆ. ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸಿಗಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿದೆ. ಬಳಿಕ ಸಂಪೂರ್ಣ ಮಾರ್ಗ ಪರಿಶೀಲನೆ ಮಾಡಿ, ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲುಗಳ ಮೂಲಕವೇ ಮಾರ್ಗ ಸಂಚಾರ ಮುಕ್ತ ಮಾಡುವುದು ಬಹುತೇಕ ಖಚಿತವಾಗಿದೆ.