ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆಗಾಗಾ ಹಿಂದೂದೇವಸ್ಥಾನಗಳಿಗೆ ಭೇಟಿ ಕೊಡುವ ಮೂಲಕ ಸಾರಾ ಸುದ್ದಿಯಾಗುತ್ತಾರೆ. ಈಗ ಅವರು ಇತಿಹಾಸ ಪ್ರಸಿದ್ಧ ಉಣಕಲ್ ಚಂದ್ರಮೌಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯಿಂದ 4 ಕಿಲೋಮೀಟರ್ ದೂರವಿರುವ ಉಣಕಲ್ ನಲ್ಲಿ ಚಂದ್ರಮೌಳೇಶ್ವರ್ ದೇವಸ್ಥಾನವಿದೆ. ಚಾಲುಕ್ಯ ಶೈಲಿಯಲ್ಲಿ ಕಟ್ಟಿರುವ ದೇವಸ್ಥಾನ ಇದಾಗಿದ್ದು, ಸುಮಾರು 600 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಸಾರಾ ಅಲಿ ಖಾನ್ ಭೇಟಿ ಕೊಟ್ಟಿದ್ದಾರೆ. ಬಿಳಿ ಹಾಗೂ ಗುಲಾಬಿ ಬಣ್ಣದ ಉಡುಗೆ ಧರಿಸಿ ದೇಗುಲದ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಸಾರಾ ಅಲಿ ಖಾನ್ ಆಗಾಗಾ ಹಿಂದೂ ದೇವಸ್ಥಾನಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನ, ಕೇದಾರನಾಥ ದೇಗುಲಕ್ಕೂ ಭೇಟಿ ಕೊಟ್ಟಿದ್ದರು. ಕೇದಾರನಾಥ್ ಚಿತ್ರದ ಮೂಲಕ ಸಾರಾ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಅನುರಾಗ್ ಬಸು ನಿರ್ದೇಶನದ ಹೊಸ ಚಿತ್ರದಲ್ಲಿ ಸಾರಾ ನಟಿಸುತ್ತಿದ್ದಾರೆ.