ಕೀವ್:- ಉಕ್ರೇನ್ ಅಧ್ಯಕ್ಷರ ತವರು ಮೇಲೆ ರಷ್ಯಾ ದಾಳಿ ನಡೆದಿದ್ದು, 9 ಮಕ್ಕಳು ಸೇರಿ 18 ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್ನ ವಸತಿ ಪ್ರದೇಶದ ಮೇಲೆ ಮಾರಕ ದಾಳಿ ನಡೆದಿದ್ದು, ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ
ಐಸ್ ಕ್ರೀಮ್ ತಿನ್ನೋ ಮುನ್ನ ಹುಷಾರ್: ರುಚಿ- ಬಣ್ಣ ಹೆಚ್ಚಿಸಲು ಸ್ಯಾಕರಿನ್ ಬಳಕೆ!?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಅಧ್ಯಕ್ಷ ಝೆಲೆನ್ಸ್ಕಿ ಅವರ ತವರು ನಗರದ ಮೇಲೆ ಶುಕ್ರವಾರ ನಡೆದ ದಾಳಿಯು ವಸತಿ ಬ್ಲಾಕ್ಗಳನ್ನು ಹಾನಿಗೊಳಿಸಿದ್ದು, ಭಾರೀ ಬೆಂಕಿಗೆ ಕಾರಣವಾಯಿತು ಎಂದು ಡ್ನಿಪ್ರೊಪೆಟ್ರೋವ್ಸ್ಕ್ ಗವರ್ನರ್ ಸೆರ್ಹಿ ಲೈಸಾಕ್ ತಿಳಿಸಿದ್ದಾರೆ.
ಕನಿಷ್ಠ 50 ಜನರು ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳು ತಿಳಿಸಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಮೂರು ತಿಂಗಳ ಮಗು ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲೈಸಾಕ್ ಮಾಹಿತಿ ನೀಡಿದ್ದಾರೆ.