ಮಂಡ್ಯ: ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಸಹಜ, ಟೀಕೆ ಟಿಪ್ಪಣಿಗಳು ಚರ್ಚೆ ಅನವಶ್ಯಕ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಅಭಿನಂದಿಸಿದ್ದಾರೆ.
ಜಿಲ್ಲಾಧಿಕಾರಿ, ಎಸ್.ಪಿ. ಕೇಂದ್ರ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತ್ ಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸುವ ಕೆಲಸ ಮಾಡಿದ್ದಾರೆ. 87 ನೇ ಸಾಹಿತ್ಯ ಸಮ್ಮೇಳನ ನಡೆದಿದೆ ನಾಯಕರು ಸಹ ಅಭಿನಂದಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ; ಮಾಜಿ ಪ್ರಧಾನ ವ್ಯವಸ್ಥಾಪಕನ ಬಂಧನ
ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ನಡೆದಿದೆ. ಹಳೆಯ ಬಾಕಿಯನ್ನು ನಮ್ಮ ಸರ್ಕಾರ ಬಂದ ಮೇಲೆ 5 ಕೋಟಿ ಕೊಟ್ಟಿದ್ದೇವೆ. ಮಂಡ್ಯ ಚರಿತ್ರೆಯಲ್ಲಿ ಹೊರ ದೇಶದಿಂದ ಸಾಹಿತಿಗಳು ಬಂದಿದ್ದರು. ಗೋಷ್ಟಿಗಳು ಕೂಡ ಚೆನ್ನಾಗಿ ನಡೆದಿದೆ, ಸಂತೋಷ ಪಡುವ ರೀತಿಯಲ್ಲಿ ಸಮ್ಮೇಳನ ನಡೆದಿದೆ. ಬಹಳ ಯಶಸ್ವಿಯಾಗಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ.ಕನ್ನಡದ ಹಬ್ಬವನ್ನು ಮಂಡ್ಯದಲ್ಲಿ ಮೂರು ದಿನ ಮಾಡಲಾಗಿದೆ. ಪ್ರತಿ ಹಂತದಲ್ಲಿ 27 ಸಮಿತಿ ರಚನೆ ಮಾಡಲಾಗಿತ್ತು. ಚುಂಚಶ್ರೀ ನಿರ್ಮಲನಾಂದನಾಥ ಸ್ವಾಮಿ ಸಮ್ಮುಖದಲ್ಲಿ ನಡೆದಿದೆ. ಸರ್ಕಾರದ ಹಣ ಸಾರ್ವಜನಿಕ ಹಣ ಒಂದು ರೂ ಎಲ್ಲಿಯೂ ವ್ಯತ್ಯಾಸವಾಗದಂತೆ ಕಾರ್ಯಕ್ರಮ ನಡೆದಿದೆ.
ಸರ್ಕಾರದ 30 ಕೋಟಿಯಲ್ಲಿ ಉಳಿದ 2.53 ಕೋಟಿ ಕನ್ನಡ ಭವನ ಕಟ್ಟಲು ನಿರ್ಧಾರ ಮಾಡಲಾಗಿದೆ. ಸರ್ಕಾರದ ಮಂಜೂರಾತಿ ಪಡೆದು ತೀರ್ಮಾನ ಮಾಡಲಾಗುತ್ತದೆ. ಯಶಸ್ವಿಯಾಗಿ ಕಾರ್ಯಕ್ರಮ ಮಾಡಿದ್ದಕ್ಕೆ ಸಿಎಂ ಡಿಸಿಎಂ ಅವರು ಕೂಡ ಅಭಿನಂದಿಸಿದ್ದಾರೆ ಎಂದರು.