ಉತ್ತರಪ್ರದೇಶ : ಇಂದು ದೇಶಾದ್ಯಂತ ಶ್ರೀರಾಮನವಮಿಯ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ‘ಶ್ರೀರಾಮ ನವಮಿ’ ಅದ್ದೂರಿ ಆಚರಣೆ ಕಣ್ಮನ ಸೆಳೆಯುವಂತಿವೆ. ಶ್ರೀರಾಮನವಮಿಯ ಶುಭದಿಂದು ಸೂರ್ಯನ ಕಿರಣ ಶ್ರೀರಾಮನ ಹಣೆಯ ಸ್ಪರ್ಶಿಸಿದ್ದು, ಈ ಕ್ಷಣವನ್ನು ಭಕ್ತರು ಕಣ್ತುಂಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆ ದೇವಸ್ಥಾನದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇದು ಎರಡನೇ ಆಚರಣೆಯಾಗಿದೆ. ಸ್ವಾಮಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸೂರ್ಯಕಿರಣವು ಬಲರಾಮನ ಹಣೆಯ ಸ್ಪರ್ಶಿಸಿ ‘ಸೂರ್ಯ ತಿಲಕ’ ಮೂಡಿದ್ದನ್ನು ಕಂಡು ಭಕ್ತರು ಪುಳಕಿತರಾದರು. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭಗುಡಿಯಲ್ಲಿರುವ ಶ್ರೀರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ತಿಲಕವಾಗಿ ಕೆಲವು ನಿಮಿಷಗಳ ಕಾಲ ಬೆಳಗುತ್ತವೆ. ಈ ಅದ್ಭುತ ದೃಶ್ಯಗಳು ಭಕ್ತಪರವಶವಾಗುವಂತೆ ಮಾಡಿದವು.
ವಿಶ್ವ ವಿಖ್ಯಾತ ವೈರಮುಡಿ ಉತ್ಸವ ; ಡ್ರೋಣ್ ಕಣ್ಣಲ್ಲಿ ಮೇಲುಕೋಟೆ ದೃಶ್ಯ ವೈಭವ
ಅಯೋಧ್ಯೆಯಲ್ಲಿ ರಾಮ ನವಮಿಯ ಸಂದರ್ಭದಲ್ಲಿ, ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ರಾಮ್ ಲಲ್ಲಾನನ್ನು ನಾಲ್ಕು ನಿಮಿಷಗಳ ಕಾಲ ಸ್ಪರ್ಶಿಸಿದವು. ಕಳೆದ ವರ್ಷ ಮಧ್ಯಾಹ್ನ 12:16ಕ್ಕೆ ಬಲರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಮೂರೂವರೆ ನಿಮಿಷಗಳ ಕಾಲ ಕಾಣಿಸಿಕೊಂಡವು. ಅಯೋಧ್ಯೆ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿರುವ ರಾಮನ ಪ್ರತಿಮೆಯ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಮೂರನೇ ಮಹಡಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ವಿಜ್ಞಾನಿಗಳ ಸಹಾಯದಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಇದನ್ನು ನಿರ್ಮಿಸಿದ್ದಾರೆ.