ಮಂಗಳೂರು: ಮಂಗಳೂರಿನ ಕೋಟೆಕಾರ್ ಸಹಕಾರಿ ಬ್ಯಾಂಕ್ನಲ್ಲಿನ ದರೋಡೆ ಪ್ರಕರಣದ ಬಳಿಕ ಮಂಗಳೂರು ಹೊರವಲಯದ ದೇರಳಕಟ್ಟೆ ಜಂಕ್ಷನ್ನಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆ ಯತ್ನ ನಡೆದಿತ್ತು. ಈ ವೇಳೆ ದರೋಡಗೆ ಮುಂದಾಗಿದ್ದ ಖದೀಮರು ಪೊಲೀಸರಿಗೆ ಸಿಕ್ಕಿಬಿದಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟೋರಿಯಸ್ ದರೋಡೆಕೋರರಿಬ್ಬರ ವಿಚಾರಣೆ ತೀವ್ರವಾಗಿದ್ದು, ಮಂಗಳೂರು ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಕೇರಳ ಮೂಲದ ಐವರು ದರೋಡೆಕೋರರಿಂದ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ್ದರು. ದರೋಡೆಗೂ ಮೊದಲು ಮುರುಳಿ ತಂಡ ಫೈನಾನ್ಸ್ನ ರೇಖಿ ನಡೆಸಿತ್ತು. ಫೈನಾನ್ಸ್ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನಾಭರಣವಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎಂಬುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಗ್ರಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟ ; ಓರ್ವ ಕಾರ್ಮಿಕ ಸಾವು, ಮತ್ತೋರ್ವನಿಗೆ ಗಾಯ
ತಡರಾತ್ರಿ ಕಟ್ಟಡದ ಹಿಂದಿರುವ ಮರವೇರಿ ಫೈನಾನ್ಸ್ ಕಟ್ಟಡ ಪ್ರವೇಶಿಸಿದ್ದ ಮುರುಳಿ, ಹರ್ಷದ್ ಮತ್ತು ಲತೀಫ್, ಅತ್ಯಾಧುನಿಕ ಸೈಲೆಂಟ್ ಡ್ರಿಲ್ ಮಿಷನ್ ತಂದಿದ್ದರು. ಫೈನಾನ್ಸ್ನಲ್ಲಿದ್ದ ಅತ್ಯಾಧುನಿಕ ಸೆನ್ಸರ್ ಸೈರನ್ ಮೊಳಗಿದ ಹಿನ್ನೆಲೆ ಸ್ಥಳದಲ್ಲೇ ಮುರುಳಿ ಮತ್ತು ಹರ್ಷದ್ ಸಿಕ್ಕಿಬಿದ್ದಿದ್ದು, ಲತೀಫ್ ಸ್ಥಳದಿಂದ ಪರಾರಿಯಾಗಿದ್ದ.35 ಕೆಜಿಗೂ ಹೆಚ್ಚು ಚಿನ್ನಾಭರಣ ಮುತ್ತೂಟ್ ಫೈನಾನ್ಸ್ನಲ್ಲಿತ್ತು. ಆದರೆ ಕಂಟ್ರೋಲ್ ರೂಮ್ನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿತ್ತು.