ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ.
ಗ್ರಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟ ; ಓರ್ವ ಕಾರ್ಮಿಕ ಸಾವು, ಮತ್ತೋರ್ವನಿಗೆ ಗಾಯ
ಯಾವುದಕ್ಕೂ ಹೆದರದ ಕೆಲವರು ಜಿರಳೆಗೆ ಭಯ ಪಡುತ್ತಾರೆ. ಅದರಲ್ಲಿಯೂ ಜಿರಳೆ ಅಂದ್ರೆ ಸಾಕು ಹೆಣ್ಮಕ್ಕಳಂತೂ ಎದ್ದು, ಬಿದ್ದು ಓಡಿ ಹೋಗ್ತಾರೆ. ಮೈ ಮೇಲೆ ಜಿರಣೆ ಹರಿಯುತ್ತಿದ್ದಂತೆಯೇ ಅದನ್ನು ಸಾಯಿಸಲು ಪೊರಕೆಯನ್ನು ಹುಡುಕುತ್ತಾರೆ.
ಅಲ್ಲದೇ ಮನೆಯಲ್ಲಿ ಜಿರಳೆಗಳು ಹೆಚ್ಚಾದರೆ ಕಾಯಿಲೆ ಕೂಡ ಹೆಚ್ಚಾದಂತೆ. ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಿರಳೆಗಳು ಅಡ್ಡಾಡಿದ ಜಾಗದಲ್ಲಿದ್ದ ಆಹಾರ ಸೇವಿಸಬಾರದು. ಏಕೆಂದರೆ ಇದರಿಂದ ನಾನಾ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವರು ಮಂದಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಪ್ರೇಗಳನ್ನು ತಂದು ಸಿಂಪಡಿಸುತ್ತಾರೆ. ಹೀಗಿದ್ದರೂ ಮನೆಯಿಂದ ಜಿರಳೆಗಳು ಹೋಗುವುದಿಲ್ಲ. ಹಾಗಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸುವ ಮೂಲಕ ಮನೆಯಿಂದ ನೀವು ಜಿರಳೆಗಳನ್ನು ಹಿಮ್ಮೆಟ್ಟಿಸಬಹುದು.
ಬೇ ಎಲೆ: ಬೇ ಎಲೆಗಳನ್ನು ರುಬ್ಬುವ ಮೂಲಕ ಪುಡಿ ಮಾಡಿ ಅಥವಾ ಬಿಸಿ ನೀರಿನಲ್ಲಿ ಕುದಿಸಿ. ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ. ಈ ವಾಸನೆ ಜಿರಳೆಗಳು ಇಷ್ಟಪಡುವುದಿಲ್ಲ. ಇದರಿಂದ ಅವು ಮನೆ ಬಿಟ್ಟು ಹೋಗುತ್ತದೆ.
ಬೇವಿನ ಸೊಪ್ಪು: ಜಿರಳೆಗಳನ್ನು ತೊಡೆದುಹಾಕಲು ಬೇವಿನ ಸೊಪ್ಪು ಪ್ರಯೋಜನಕಾರಿ ಆಗಿದೆ. ರಾತ್ರಿ ಮಲಗುವ ಮುನ್ನ ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಇದರ ವಾಸನೆಯನ್ನು ತಡೆಯಲಾರದೇ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.
ಲವಂಗ: ಜಿರಳೆಗಳನ್ನು ತೊಡೆದು ಹಾಕಲು ಲವಂಗ ಉತ್ತಮ ಪರಿಹಾರ ಎಂದೇ ಹೇಳಬಹುದು. ಇದಕ್ಕಾಗಿ ಯಾವುದೇ ರೀತಿಯ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಕೇವಲ ಜಿರಳೆಗಳು ಓಡಾಡುವ ಸ್ಥಳದಲ್ಲಿ ಲವಂಗ ಇಟ್ಟರೆ ಸಾಕು.
ಅಡಿಗೆ ಸೋಡಾ: ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆಯನ್ನು ಬೆರೆಸಿ, ಜಿರಳೆ ಪ್ರವೇಶಿಸುವ ಬಿರುಕು ಮತ್ತು ಜಿರಳೆ ಕಟ್ಟಿದ ಗೂಡಿಗೆ ಹಾಕಿ. ಇದನ್ನು ತಿಂದು ಜಿರಳೆಗಳು ಸಾಯುತ್ತವೆ.