ಬೆಳಗಾವಿ: ಕೈಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ಮಾಡಿದ್ದ ಅಥಣಿ ಮೂಲದ ಯುವಕನಿಗೆ ಪೊಲೀಸ್ ಲಾಠಿ ರುಚಿ ತೋರಿಸಿದ್ದಾರೆ. ಇತ್ತೀಚಿಗೆ ಬಿಗ್ ಬಸ್ ಮನೇಯಂಗಳದಲ್ಲಿ ರಾಜ್ಯದ ಮನ ಗೆದ್ದ ಇಬ್ಬರು ನಟರ ರೀಲ್ಸ್ ಕೇಸ್ ಬೆನ್ನಲ್ಲೆ ಇನ್ಸ್ಟಾಗ್ರಾಮ್ ನಲ್ಲಿ, ಲಾಂಗ್, ಮಚ್ಚು, ತಲ್ವಾರ್ ಹಿಡಿದು ಅಸಭ್ಯ ವರ್ತನೆ ತೋರುತ್ತಿರುವವರ ವಿರುದ್ದ ಪೊಲೀಸರು ಮುಲಾಜಿಲ್ಲದೆ ಕೇಸ್ ದಾಖಲಿಸುತ್ತಿದ್ದು, ಯುವಕರ ರೀಲ್ಸ್ ಹುಚ್ಚಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ನಿನ್ನೆ ಅಥಣಿ ಪಟ್ಟಣದ ಮಹಾಂತೇಶ ಸದಾಶಿವ ಮಾಳಿ ಎಂಬ ಯುವಕ ತನ್ನ ಇನ್ಸ್ಟಾ ಪೇಜ್ ನಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು,ಶಿ ವರಾಜಕುಮಾರ್ ನಟನೆಯ “ಶಿವ” ಚಿತ್ರದ ಅಂಡರ್ವರ್ಡ್ ಅಂದ್ರೆ ಇಷ್ಟ ಕಣ್ರೀ, ಹಳೆ ಲಾಂಗು ಅಂದ್ರೆ ಬೆಸ್ಟು ಕಣ್ರೀ ಎಂಬ ಹಾಡಿಗೆ ರಿಲ್ಸ್ ಮಾಡಿ ಪೋಸ್ ಕೊಟ್ಟಿದ್ದ. ಈ ರೀಲ್ಸ್ ರಾಜನ ಹುಚ್ಚಾಟಕ್ಕೆ ಅಥಣಿ ಪೊಲೀಸರು ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮಂಗಳೂರಿನಲ್ಲಿ ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆ ಯತ್ನ ; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ
ಈ ತೀರಿ ಆಯುಧ ಹಿಡಿದು ಪೋಸ್ ಕೊಡುವವರ ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಯುವಕರು ಸಾಮಾಜಿಕ ಕಳಿಕಳಿ ಸ್ವಾಸ್ತ್ಯ ಕಾಪಾಡುವಂತೆ ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ್ ಎಚ್ಚರಿಕೆ ನೀಡಿದ್ದಾರೆ.