ಕಲಬುರಗಿ : ಕಾಳಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅತ್ತೆ ಮನೆಗೆ ಕನ್ನ ಹಾಕಿದ್ದ ಅಳಿಯಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅತ್ತೆ ಕೂಡಿಟ್ಟಿದ್ದ ಬರೋಬ್ಬರಿ 11 ಲಕ್ಷ ಹಣ ಎಗರಿಸಿದ್ದ ಮೀನಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 9 ಲಕ್ಷ 30 ಸಾವಿರ ರಿಕವರಿ ಮಾಡಿದ್ದಾರೆ.
ಮೀನಪ್ಪನ ಅತ್ತೆ ಸಿದ್ದಮ್ಮ ಹೊಲ ಖರೀದಿಸಲು ಎಂದು ಹಣ ತಂದು ಮನೆಯಲ್ಲಿಟ್ಟಿದ್ದರು. ಇದನ್ನು ಗಮನಿಸಿದ್ದ ಮೀನಪ್ಪ ಸಿದ್ದಮ್ಮ ಮನೆಯಲ್ಲಿ ಇಲ್ಲದ ವೇಳೆ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ತಾನು ಕಳ್ಳತನ ಮಾಡಿದ್ದ ಹಣದಲ್ಲಿ 1 ಲಕ್ಷ 70 ಸಾವಿರ ಹಣ ತಮ್ಮ ಅನೀಲನಿಗೆ ಕೊಟ್ಟಿದ್ದ ಎನ್ನಲಾಗಿದೆ.
ಘಟನೆ ಸಂಬಂಧ ಸಿದ್ದಮ್ಮ ಕಾಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.