ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹಾಗೂ ನಾಡಿನ ಪ್ರಸಿದ್ದ ಹುಲಿ ಸಂರಕ್ಚಿತ ಅರಣ್ಯ ಪ್ರದೇಶ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಉಳಿವಿಗಾಗಿ ಬೃಹತ್ ಹೋರಾಟ ನಡೆಯುತ್ತಿದೆ. ಬಂಡೀಪುರ ಉಳಿವಿಗಾಗಿ ನಮ್ಮ ಹೋರಾಟ ಎಂಬ ಬೃಹತ್ ಪಾದಯಾತ್ರೆ ನಡೆದಿದೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಸುವಂತೆ ಬಂಡೀಪುರ ಅಭಯಾರಣ್ಯದಲ್ಲಿ ಸಾವಿರಾರು ಪರಿಸರ ಪ್ರಿಯರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಭಂಧ ಮುಂದುವರಿಸುವಂತೆ ಪರಿಸರ ಪ್ರಿಯರಿಂದ ಬೃಹತ್ ಪಾದಯಾತ್ರೆ ಮೂಲಕ ರಾತ್ರೀ ಸಂಚಾರ ತೆರವುಗೊಳಿಸುವಂತೆ ಮುಂದಾಗಿದ್ದ ಕೇರಳಿಗರಿಗೆ ಸೆಡ್ಡು ಹೊಡೆದ ಪರಿಸರ ಪ್ರಿಯರುಅಭಿಯಾನದ ಪಾದಯಾತ್ರೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬೃಹತ್ ಪಾದಯಾತ್ರೆಗೆ ಮೈಸೂರು ಬೆಂಗಳೂರು ಚಾಮರಾಜನಗರ ಸೇರಿದಂತೆ ಹಲವು ಭಾಗಗಳಿಂದ ಪರಿಸರ ಪ್ರಿಯರು ಭಾಗಿಯಾಗಿದ್ದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಗ್ಗಳಹುಂಡಿ ಗ್ರಾಮದಿಂದ ಮದ್ದೂರು ಚೆಕ್ ಪೋಸ್ಟ್ ವರೆಗೆ ನಡೆದ ಬೃಹತ್ ಪಾದಯಾತ್ರೆಯಲ್ಲಿ ರಾತ್ರಿ ಸಂಚಾರ ಮುಂದುವರಿಸುವಂತೆ ಹಾಗೂ ಸುಪ್ರೀಕೋಟ್೯ ಆದೇಶ ಪಾಲಿಸುವಂತೆ ಘೋಷಣೆ ಕೂಗಿದರು.