ಐಸ್ ಕ್ರೀಂ ತಿನ್ನುವ ಅಭ್ಯಾಸ ಯಾರಿಗೆ ತಾನೆ ಇಲ್ಲ ಹೇಳಿ. ಕೆಲವರು ಐಸ್ಕ್ಯಾಂಡಿ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಾಗಿದ್ದ ಸಂದರ್ಭದಲ್ಲಿ ಅಭ್ಯಾಸವಾಗಿ ಬೆಳೆದುಬಂದ ರೂಡಿ ದೊಡ್ಡವರಾದ ಮೇಲೂ ಸಹ ಮುಂದುವರೆದುಕೊಂಡು ಬಂದಿರುತ್ತದೆ.
ಮೀಟರ್ ಬಡ್ಡಿ ದಂಧೆ ಕಿರುಕುಳ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ದೊಡ್ಡವರಾಗಿ ಒಂದು ವೇಳೆ ನೀವು ಈಗಲೂ ಸಹ ಚಿಕ್ಕ ಮಕ್ಕಳಂತೆ ಐಸ್ ಕ್ರೀಮ್ ಗಳನ್ನು ಮತ್ತು ಐಸ್ ಕ್ಯಾಂಡಿಗಳನ್ನು ಆಗಾಗ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರೆ ಈ ಲೇಖನವನ್ನು ಒಮ್ಮೆ ಓದಿ…ಬೇಸಿಗೆಯಲ್ಲಿ ತಂಪಾಗಿರಲು ಐಸ್ ಕ್ರೀಮ್ ಅನ್ನು ಹೆಚ್ಚು ಸೇವಿಸುತ್ತಾರೆ. ಇನ್ನು ಕೆಲವರು ಕಾಲ ಯಾವುದೇ ಇರಲಿ ಸಖತ್ ಐಸ್ ತಿನ್ನುತ್ತಾರೆ. ಐಸ್ ಕ್ರೀಂ ತಿಂದ ಕೂಡಲೇ ರುಚಿ ಮತ್ತು ಆಹ್ಲಾದಕರ ಭಾವ ಮೂಡುತ್ತದೆ.
ಅದರಂತೆ ಬೇಸಿಗೆಯಲ್ಲಿ ಬಹುತೇಕ ಜನ ಐಸ್ಕ್ರೀಮ್, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಐಸ್ಕ್ರೀಮ್ ಸವಿಯುತ್ತಿದ್ದಾರೆ. ಕೆಲವರು ಮನೆಯಲ್ಲೇ ತರಹೇವಾರಿ ಐಸ್ಕ್ರೀಂ ತಯಾರಿಸಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಶಾಕಿಂಗ್ ಸುದ್ದಿಯೊಂದು ನೀಡಿದೆ.
ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಐಸ್ಕ್ರೀಮ್ಗೆ ಡಿಟರ್ಜಂಟ್ ಪೌಡರ್ (ಮಾರ್ಜಕ ಪುಡಿ), ರಾಸಾಯನಿಕ ಮಿಶ್ರಣ ಮಾಡುತ್ತಿರುವುದು ಬಹಿರಂಗವಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕದ ನೂರಾರು ಪಾರ್ಲರ್ಗಳು, ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಈ ಸಂಗತಿ ಬಯಲಾಗಿದೆ
97 ಅಂಗಡಿಗಳಿಗೆ ನೋಟಿಸ್
ಎಫ್ಡಿಎ ಅಧಿಕಾರಿಗಳು ಕರ್ನಾಟಕದ 220 ಐಸ್ಕ್ರೀಮ್ ಪಾರ್ಲರ್ಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಇವುಗಳ ಪೈಕಿ 97 ಅಂಗಡಿಗಳಲ್ಲಿಐಸ್ಕ್ರೀಮ್ ಕ್ರೀಮಿಯಾಗಿ ಇರಲಿ ಎಂದು ಡಿಟರ್ಜಂಟ್ ಪೌಡರ್ ಮಿಶ್ರಣವಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ತಂಪು ಪಾನೀಯಗಳಲ್ಲಿಫಾಸ್ಫರಿಕ್ ಆ್ಯಸಿಡ್ ಪತ್ತೆಯಾಗಿದೆ. ಹಾಗಾಗಿ, 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಐಸ್ಕ್ರೀಮ್ ಹಾಗೂ ತಂಪು ಪಾನೀಯಗಳ ಸ್ಟೋರೇಜ್ ವ್ಯವಸ್ಥೆಯಲ್ಲೂಲೋಪಗಳು ಕಂಡುಬಂದಿವೆ.
ಐಸ್ಕ್ರೀಮ್, ಪಾನೀಯಗಳಿಗೆ ಏನೆಲ್ಲಮಿಶ್ರಣ?
ಯೂರಿಯಾ ಮಿಶ್ರಿತ ಡಿಟರ್ಜಂಟ್ನಿಂದ ತಯಾರಿಸಿದ ಹಾಲು
ನೈಸರ್ಗಿಕ ಸಕ್ಕರೆ ಬದಲು ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಬಳಕೆ
ತಂಪು ಪಾನೀಯಗಳಿಗೆ ಕೊಳಚೆ ನೀರು ಮಿಶ್ರಣ
ರೋಗಗಳಿಗೆ ಆಹ್ವಾನ
ಕಲಬೆರಕೆ ಉತ್ಪನ್ನಗಳ ಸೇವನೆಯಿಂದ ಹಲವು ಕಾಯಿಲೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೊಳಚೆ ನೀರು ಮಿಶ್ರಿತ ತಂಪು ಪಾನೀಯಗಳನ್ನು ಸೇವಿಸುವುದರಿಂದ ವಾಕರಿಕೆ, ವಾಂತಿ, ಅತಿಸಾರ, ಅಜೀರ್ಣತೆ ಕಾಡಬಹುದು. ಡಿಟರ್ಜಂಟ್ನಲ್ಲಿರುವ ಆಮ್ಲೀಯ, ರಾಸಾಯನಿಕ ಅಂಶಗಳು ಅನ್ನನಾಳ ಹಾಗೂ ಗಂಟಲಿಗೆ ಹಾನಿಯುಂಟು ಮಾಡಬಹುದು. ಉಸಿರಾಟದ ತೊಂದರೆ ಮಾತ್ರವಲ್ಲ, ಮೂತ್ರಪಿಂಡ ಹಾಗೂ ಯಕೃತ್ತಿಗೆ (ಲಿವರ್) ಹಾನಿ ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಫಾಸ್ಫರಿಕ್ ಆ್ಯಸಿಡ್ನಿಂದಾಗಿ ಕಿಡ್ನಿ ಸ್ಟೋನ್, ಹಲ್ಲುಗಳಿಗೆ ಹಾನಿಯಾಗಬಹುದು ಎಂದೂ ತಿಳಿಸಿದ್ದಾರೆ
ದೇಶಾದ್ಯಂತ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬೆಳಕು ಚೆಲ್ಲಿದ್ದಾರೆ. ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ವ್ಯಾಪಕ ದೂರುಗಳು ಬರುತ್ತಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.