ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಸಿನಿಮಾದ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ. ಅದಕ್ಕಾಗಿ ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದೆ. ಆದರೆ ಕಾಂತಾರ ಪ್ರೀಕ್ವೆಲ್ ಸೆಟ್ಟೇರಿ ಶೂಟಿಂಗ್ ಅಖಾಡಕ್ಕೆ ಇಳಿದಾಗಿನಿಂದಲೂ ಭಾರೀ ವಿಘ್ನಗಳು ಎದುರಾಗುತ್ತಿವೆ. ಈ ವಿಘ್ನಗಳ ನಿವಾರಣೆಗೆ ರಿಷಬ್ ಶೆಟ್ಟಿ ಮುಂದಾದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ಬಹು ನಿರೀಕ್ಷಿತ ಕಾಂತಾರ- 2 ಚಿತ್ರಕ್ಕೆ ಎದುರಾಗಿರುವ ವಿಘ್ನಗಳ ದಮನಕ್ಕೆ ರಿಷಬ್ ಶೆಟ್ಟಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡಿದ್ದಾರೆ. ನಸುಕಿನ ಜಾವ 4 ಗಂಟೆವರೆಗೂ ದೈವದ ಉತ್ಸವದಲ್ಲಿ ರಿಷಬ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ರಿಷಬ್ ದಂಪತಿ ಮಕ್ಕಳ ಸಮೇತ ಪಾಲ್ಗೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ, ವಾರಾಹಿ ಪಂಜುರ್ಲಿ ದೈವದ ಬಳಿ ಕಷ್ಟ ಹೇಳಿಕೊಂಡಿದ್ದಾರೆ. ʼನಿನಗೆ ದುಶ್ಮನ್ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ಹರಕೆ ಮಾಡಿಕೊ.. ಐದು ತಿಂಗಳ ಗಡುವಲ್ಲಿ ಒಳ್ಳೇದು ಮಾಡುತ್ತೇನೆ’ಎಂದು ವಾರಾಹಿ ಪಂಜುರ್ಲಿ ದೈವದ ರಿಷಬ್ ದಂಪತಿಗೆ ಅಭಯ ನೀಡಿದೆ.
ಇತ್ತೀಚೆಗೆ ಕಾಂತಾರ 1 ಸಿನಿಮಾ ಬಿಡುಗಡೆ ಪೋಸ್ಟ್ ಪೋನ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯಾಗ್ತಿಲ್ಲ ಎನ್ನಲಾಗಿತ್ತು. ಅದಕ್ಕೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದ್ದು, ಅಕ್ಟೋಬರ್ 2ರಂದೇ ಬಹುಭಾಷಾಯಲ್ಲಿ ಚಿತ್ರ ತೆರೆಗೆ ಬರಲಿದೆ ಅಂತಾ ತಿಳಿಸಿದೆ.
ಕಾಂತಾರ ಸಿನಿಮಾಗೆ ಸಾಲು ಸಾಲು ವಿಘ್ನ
ಕಾಂತಾರ ಪ್ರೀಕ್ವೆಲ್ ಚಿತ್ರದ ಚಿತ್ರೀಕರಣ ಮುದುರಿನಲ್ಲಿ ನಡೆಯುವ ವೇಳೆ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ಹಿಂದಿರುಗುತ್ತಿದ್ದಾಗ, ಜೂನಿಯರ್ ಆರ್ಟಿಸ್ಟ್‌ಗಳನ್ನು ಕೊಂಡೊಯ್ಯುತ್ತಿದ್ದ ಮಿನಿ ಬಸ್ ಜಡ್ಕಲ್ ಬಳಿ ಅಪಘಾತಕ್ಕೀಡಾಗಿತ್ತು. ಈ ಅಪಘಾತಕ್ಕೆ ಕಾರಣ ಏನು ಅನ್ನೋ ಸ್ಥಳೀಯ ಜನರಲ್ಲಿ ಭಾರೀ ಚರ್ಚೆಯಾಗ್ತಿದೆ.
ಕಾಂತಾರ 1 ಚಿತ್ರದಲ್ಲಿ ನಟಿಸಿದ್ದ ಜೂನಿಯರ್ ಆರ್ಟಿಸ್ಟ್ ಗುಂಪು ಸರಿಯಾದ ಸೌಲಭ್ಯ ನೀಡುತ್ತಿಲ್ಲವೆಂದು ಕೋ ಆರ್ಟಿನೆಟರ್‌ಗಳ ವಿರುದ್ಧ ಕಿಡಿಕಾರಿದ್ದರು. ಇದು ಹೊಂಬಾಳೆ ಫಿಲ್ಮ್ಸ್‌ಗೆ ಮುಜುಗರ ಕೂಡ ಆಗಿತ್ತು. ಈ ಬೆನ್ನಲ್ಲೇ ಹೊಂಬಾಳೆ ತಂಡ ಇದು ಜೂನಿಯರ್ ಆರ್ಟಿಸ್ಟ್‌ಗಳನ್ನು ಸಪ್ಲೈ ಮಾಡುವ ತಂಡದಿಂದ ಆದ ತಪ್ಪು. ತಮ್ಮಿಂದ ತಪ್ಪುಗಳಾಗಿಲ್ಲ ಎಂದು ಹೇಳಿತ್ತು. ಬಳಿಕ ಮತ್ತೆ ಶೂಟಿಂಗ್ ಮುಂದುವರೆದಿತ್ತು.