ನವದೆಹಲಿ : 19 ವರ್ಷದ ಯುವತಿಯ ಮೇಲೆ ಚಾಕುವಿನಿಂದ ಇರಿದ ಘಟನೆ ನೈಋತ್ಯ ದೆಹಲಿಯ ಕಿರ್ಬಿ ಪ್ಲೇಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಮುಂದೆಯೇ ವ್ಯಕ್ತಿಯೊಬ್ಬ ಯುವತಿಗೆ ಹಲವಾರು ಬಾರಿ ಚಾಕುವಿನಿಂದ ಇರಿದು, ಬಳಿಕ ಅದೇ ಚಾಕುವಿನಿಂದ ತನ್ನನ್ನು ತಾನು ಗಾಯಗೊಳಿಸಿಕೊಂಡಿದ್ದಾನೆ. ಕಳೆದ ಭಾನುವಾರ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಲ್ಲೆ ದಾರಿಹೋಕರೊಬ್ಬರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ನಲ್ಲೇ ಧೂಮಪಾನ: ‘ಕಿರಾತಕ’ ನಟಿಗೆ ಫ್ಯಾನ್ಸ್ ತರಾಟೆ – ಇದು ಬೇಕಿತ್ತಾ?
ಹುಡುಗಿಯ ಕುತ್ತಿಗೆ ಮತ್ತು ಹೊಟ್ಟೆಯ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸ್ಥಳದಿಂದ ಚಾಕು ಪತ್ತೆಯಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಅಮಿತ್ ಮತ್ತು ಸಂತ್ರಸ್ತ ಯುವತಿ ಕಳೆದ ವರ್ಷದಿಂದ ಸ್ನೇಹಿತರಾಗಿದ್ದರು ಮತ್ತು ಯಾವುದೋ ವಿಷಯದ ಬಗ್ಗೆ ಜಗಳವಾಡಿದ್ದರು ಎನ್ನಲಾಗುತ್ತಿದ. ಇನ್ನೂ ಯುವತಿಗೆ ಚಾಕುವಿನಿಂದ ಇರಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.