ಬೆಂಗಳೂರು:- ಬಿಜೆಪಿ ಜನಾಕ್ರೋಶ ಹೋರಾಟ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ನಾವು ಎರಡು ವರ್ಷದಿಂದ ಉತ್ತಮ ಆಡಳಿತ ಕೊಟ್ಟಿದ್ದೇವೆ. ಅದನ್ನ ತಡೆಯೋಕೆಅವರಿಗೆ ಆಗ್ತಿಲ್ಲ. ನಾವು ಗ್ಯಾರಂಟಿ ಕೊಡಲ್ಲ ಅಂದುಕೊಂಡಿದ್ರು. ಜನರಿಗೆ ಯೋಜನೆಗಳನ್ನು ನೀಡ್ತಿದ್ದೇವೆ. ಐದು ಯೋಜನೆಗಳು ಜನಮನ್ನಣೆ ಪಡೆದಿದೆ. ಯೋಜನೆಗಳು ಅನುಷ್ಠಾನ ಆಗಿದೆ. ಸಿಎಂ ಬ್ಯಾಲೆನ್ಸಡ್ ಬಜೆಟ್ ನೀಡಿದ್ದಾರೆ. ಸಿಎಂ ಬಜೆಟ್ ಕೂಡ ಜನರ ಮನ್ನಣೆ ಪಡೆದಿದೆ.
ಆದ್ರೆ ಬಿಜೆಪಿಯವರಿಗೆ ಏನು ಇಲ್ಲ. ಹೀಗಾಗಿ ಅವರು ಹೋರಾಟ ಮಾಡ್ತಿದ್ದಾರೆ. ನಾವು ಕಳೆದುಹೋಗ್ತೇವೆ ಅಂತ ಮಾಡ್ತಿದ್ದಾರೆ ಎಲ್ಲಿದೆ ಜನಾಕ್ರೋಶ ಅವರೇ ಸೇರಿ ಆಕ್ರೋಶ ಹೊರಹಾಕಿದ್ರೆ ಹೇಗೆ? ಜನರು ಬೀದಿಗೆ ಬಂದು ನಮ್ಮನ್ನು ಬೈಬೇಕು. ಆದ್ರೆ ಅತಂಹದ್ದು ಎಲ್ಲಿಯೂ ಇಲ್ಲ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ವಾಗ್ದಾಳಿ ಮಾಡಿದ್ದಾರೆ.
ಇದೇ ವೇಳೆ ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ವಿಚಾರವಾಗಿ ಮಾತನಾಡಿ, ಸರ್ಕಾರ ಸಂವಿಧಾನದ ಪ್ರಕಾರ ಮೀಸಲಾತಿ ನೀಡಿದೆ. ಯಾವ ಸರ್ಕಾರ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ. ಅದೇ ರೀತಿ ನಮ್ಮ ಸರ್ಕಾರವೂ ಮಾಡಿದೆ. ೧೬,೧೮% ಅಲ್ಪಸಂಖ್ಯಾತರು ರಾಜ್ಯದಲ್ಲಿದ್ದಾರೆ. ಅವರು ಮುಖ್ಯ ವಾಹಿನಿಗೆ ಬರಬೇಕಲ್ಲ. ಅದಕ್ಕಾಗಿಯೇ ನಾವು ಮಾಡಿದ್ದೇವೆ ಎಂದರು.
ಯುಪಿ ಸರ್ಕಾರದಿಂದ ಗ್ಯಾರಂಟಿ ಅಧ್ಯಯನ ವಿಚಾರವಾಗಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯಶಸ್ವಿ ಆಗಿದೆ. ಬಿಜೆಪಿ ರಾಜ್ಯದಲ್ಲಿ ಗ್ಯಾರಂಟಿ ಅನುಕರಣೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯಶಸ್ವಿಯಾಗಿದೆ. ಅದಕ್ಕೆ ತಾನೇ ಅವರು ಅಧ್ಯಯನ ಮಾಡ್ತಿರೋದು ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಆಕ್ರೋಶ ಹೊರ ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಿ.ಸಿ.ಚಂದ್ರಶೇಖರ್- ಡಿಕೆಶಿ ಮಾತಿನ ವಿಚಾರವಾಗಿ ಮಾತನಾಡಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಎಲ್ಲದ್ದಕ್ಕೂ ಉತ್ತರ ಕೊಡಲು ವಕ್ತಾರನಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನಗೆ ಗೊತ್ತಿಲ್ಲ. ಸಮಯ ಬಂದಾಗ ಅಭಿಪ್ರಾಯ ಹೇಳ್ತೇವೆ. ಹೈಕಮಾಂಡ್ ತಮ್ಮದೇ ಸೋರ್ಸ್ ನಿಂದ ಮಾಹಿತಿ ಪಡೆಯುತ್ತೆ. ಸಿಎಂ, ಡಿಸಿಎಂ ಇದ್ದಾರೆ ಅವರ ಬಗ್ಗೆ ನೋಡ್ತಾರೆ ಎಂದರು.
ತೆಲಂಗಾಣ ಸಿಎಂ ಗ್ಯಾರೆಂಟಿ ವಿರೋಧ ವಿಚಾರವಾಗಿ ಮಾತನಾಡಿ, ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇರುತ್ತೆ. ನಮ್ಮ ಪಕ್ಷದ ಸರ್ಕಾರ ಅಲ್ಲಿದೆ. ಅದನ್ನ ನಮ್ಮ ಪಕ್ಷದ ವರಿಷ್ಠರು ಗಮನಿಸ್ತಾರೆ. ಲೋಪವಿದ್ದರೆ ಅದನ್ನ ಸರಿಪಡಿಸ್ತಾರೆ ಎಂದರು.
ಬಿಟಿಎಂ ಲೇಔಟ್‌ನಲ್ಲಿ ಯುವತಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಗೃಹ ಸಚಿವ ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರು ದೊಡ್ಡ ನಗರ ಇಂತಹ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ನಡೆಯುತ್ತವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಇಷ್ಟು ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಒಂದು ಘಟನೆಗಳು ಆಗುತ್ತದೆ. ನಿತ್ಯವೂ ಪೊಲೀಸ್ ಕಮೀಷನರ್‌ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಎಂದು ಹೇಳುತ್ತೇನೆ. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಏನು ಆಗುತ್ತಿದೆ ಅದನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಎಮದು ನಿತ್ಯ ಸೂಚನೆ ಕೊಡುತ್ತೇನೆ ಎಂದರು