ನಮ್ಮ ತಲೆ ಕೂದಲು ನಮ್ಮ ಸೌಂದರ್ಯದ ಪ್ರತೀಕ. ಯಾವುದೇ ಒಬ್ಬ ವ್ಯಕ್ತಿಯನ್ನು ಅಥವಾ ಮಹಿಳೆಯನ್ನು ತಲೆಯ ತುಂಬಾ ಕೂದಲಿದ್ದರೆ ಮಾತ್ರ ನೋಡಲು ಚೆನ್ನಾಗಿ ಕಾಣುತ್ತಾರೆ. ಅದಕ್ಕಾಗಿಯೇ ದೇವರು ಹದಿಹರೆಯದ ವಯಸ್ಸಿನಲ್ಲಿ ತಲೆ ತುಂಬಾ ಸುಂದರವಾದ ಕೂದಲನ್ನು ಕೊಟ್ಟಿರಬೇಕು ಎನಿಸುತ್ತದೆ. ದಿನ ಕಳೆದಂತೆ ನಮಗೂ ವಯಸ್ಸಾದಂತೆ ನಮ್ಮ ಕೂದಲಿಗೂ ವಯಸ್ಸಾಗಿ ಬೆಳ್ಳಗಾಗಿ ಉದುರಿ ಹೋಗುತ್ತದೆ. ಇತ್ತೀಚಿನ ಯುವ ಜನತೆ ತಮ್ಮ ಅಂದದ ಜೊತೆಗೆ ತಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಗೆ ಬಗೆಯ ಸ್ಟೈಲಿಂಗ್ ಟೆಕ್ನಿಕ್ ಗಳನ್ನು ಉಪಯೋಗಿಸುತ್ತಿದ್ದಾರೆ.
Health Care: ನಿತ್ಯ ಬಾಳೆಹಣ್ಣು ತಿನ್ನೋದ್ರಿಂದ ದೊರೆಯುವ ಪ್ರಯೋಜನಗಳೆಷ್ಟು ಗೊತ್ತಾ!?
ಚಳಿಗಾಲದ ಗಾಳಿ ಅಥವಾ ಬೇಸಿಗೆಯ ಬಿಸಿಲು ನಿಮ್ಮ ಕೂದಲಿನ ತೇವಾಂಶವನ್ನು ತೆಗೆದುಹಾಕಬಹುದು. ಕೂದಲನ್ನು ಅತಿಯಾಗಿ ತೊಳೆಯುವುದು ಕೂಡ ಕೂದಲಿಗೆ ಮಾರಕವಾಗಬಹುದು. ಅಲ್ಲದೇ ಹೇರ್ ಡ್ರೈಯರ್ಗಳು ಸ್ಟ್ರೈಟ್ನರ್ಗಳು ಮತ್ತು ಕರ್ಲಿಂಗ್ ಐರನ್ಗಳಂತಹ ಹೀಟ್ ಸ್ಟೈಲಿಂಗ್ ಉಪಕರಣಗಳ ಅತಿಯಾದ ಬಳಕೆಯೂ ಸ್ಪಿಲ್ಟ್ ಹೇರ್ಗೆ ಕಾರಣವಾಗಬಹುದು. ಸ್ಪಿಲ್ಟ್ ಹೇರ್ ಸಮಸ್ಯೆಯನ್ನು ಕಂಟ್ರೋಲ್ ಮಾಡಲು ಇಲ್ಲಿದೆ ಮನೆ ಮದ್ದುಗಳು.
ಆವಕಾಡೊ ಹೇರ್ ಮಾಸ್ಕ್
ಒಂದು ಮಾಗಿದ ಆವಕಾಡೊವನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ 2 ಸ್ಪೂನ್ ಜೇನುತುಪ್ಪ ಮತ್ತು 1ಮೊಟ್ಟೆಯ ಹಳದಿ ಲೋಳೆ ಸೇರಿಸಿ ಒದ್ದೆಯಾದ ಕೂದಲಿಗೆ ಲೇಪನ ಮಾಡಿ. 30ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ತೆಂಗಿನ ಎಣ್ಣೆ-ಜೇನುತುಪ್ಪದ ಹೇರ್ಮಾಸ್ಕ್
ಈ ಹೇರ್ಮಾಸ್ಕ್ ತಯಾರಿಸಲು 2ಟೇಬಲ್ಸ್ಪೂನ್ ತೆಂಗಿನಎಣ್ಣೆ ಮತ್ತು 1ಚಮಚ ಜೇನುತುಪ್ಪ ಮಿಶ್ರಣ ಮಾಡಿ ಅದನ್ನು ಒದ್ದೆಯಾದ ಕೂದಲಿಗೆ ಹಚ್ಚಿರಿ. 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ಇದರ ಹೇರ್ ಮಾಸ್ಕ್ ತಯಾರಿಸಲು 1/4ಕಪ್ ಅಲೋವೆರಾ ಜೆಲ್ ಮತ್ತು 2ಟೇಬಲ್ಸ್ಪೂನ್ ಆಲಿವ್ ಎಣ್ಣೆ ಸೇರಿಸಿ. ಒದ್ದೆ ಕೂದಲಿಗೆ ಅದನ್ನು ಹಚ್ಚಿ, 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ಬಾಳೆಹಣ್ಣು-ಮೊಸಸಿನ ಹೇರ್ಮಾಸ್ಕ್
ಬಾಳೆಹಣ್ಣು ಮತ್ತು ಮೊಸರು ನಿಮ್ಮ ಕೂದಲನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಹೊಂದಿದೆ. ಇವುಗಳ ಹೇರ್ ಮಾಸ್ಕ್ ತಯಾರಿಸಲು 1ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ 1/4ಕಪ್ ಮೊಸರನ್ನು ಸೇರಿಸಿ. ಅದನ್ನು ಒದ್ದೆಯಾದ ಕೂದಲಿಗೆ ಹಚ್ಚಿ. 30 ನಿಮಿಷ ಬಿಟ್ಟು ತೊಳೆಯಿರಿ
ಮೊಟ್ಟೆ-ಮೊಸರಿನ ಹೇರ್ಮಾಸ್ಕ್
ಮೊಟ್ಟೆ ಮತ್ತು ಮೊಸರು ಎರಡೂ ಪೋಷಕಾಂಶಗಳನ್ನು ಒಳಗೊಂಡಿದ್ದು ಅದು ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರ ಹೇರ್ ಮಾಸ್ಕ್ ತಯಾರಿಸಲು, 1ಮೊಟ್ಟೆಯನ್ನು ಒಡೆದು ಹಾಕಿ.
ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಇದನ್ನು ಒದ್ದೆಯಾದ ಕೂದಲಿಗೆ ಅನ್ವಯಿಸಿ, 30ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ಆಪಲ್ ಸೈಡರ್ ವಿನೆಗರ್ ನೆತ್ತಿಯ ಪಿಹೆಚ್ ಸಮತೋಲನಗೊಳಿಸುವ ಮೂಲಕ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.ಒಂದು ಬಟ್ಟಲಿನಲ್ಲಿ 1/4ಕಪ್ ಆಪಲ್ ಸೈಡರ್ ವಿನೆಗರ್ ಮತ್ತು 1ಕಪ್ ನೀರನ್ನು ಸೇರಿಸಿ. ತಲೆಸ್ನಾನದ ನಂತರ ಈ ಮಿಶ್ರಣವನ್ನು ಕೂದಲಿನ ಮೇಲೆ ಸುರಿಯಿರಿ. ಎರಡು ನಿಮಿಷದ ನಂತರ ತೊಳೆಯಿರಿ.
ತೆಂಗಿನಹಾಲು ಕೂದಲನ್ನು ಹೈಡ್ರೇಟ್ ಮಾಡಲು ಸಹಕಾರಿಯಾಗಿದೆ. ಕೂದಲನ್ನು ಶಾಂಪೂ ಮತ್ತು ಕಂಡೀಷನಿಂಗ್ ಮಾಡಿದ ನಂತರ 1ಕಪ್ ತೆಂಗಿನ ಹಾಲನ್ನು ಕೂದಲಿಗೆ ಹಾಕಿಕೊಳ್ಳಿ. 2 ನಿಮಿಷದ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.
ಆಲಿವ್ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ನೈಸರ್ಗಿಕ ಘಟಕಾಂಶವಾಗಿದೆ. 1/4ಕಪ್ ಆಲಿವ್ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ ನಂತರ ಕೂದಲಿಗೆ ಅನ್ವಯಿಸಿ. 30ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ನಿಂಬೆರಸವು ಶುಚಿಗೊಳಿಸುವ ಗುಣಲಕ್ಷಣಗಳನ್ನು ಹೊಂದಿದ್ದು, ಜೇನುತುಪ್ಪವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.1 ಚಮಚ ಜೇನುತುಪ್ಪ ಮತ್ತು ನಿಂಬೆರಸದ ಜತೆಗೆ 1 ಕಪ್ ನೀರನ್ನು ಸೇರಿಸಿ.ತಲೆಸ್ನಾನದ ನಂತರ ಈ ಮಿಶ್ರಣವನ್ನು ಕೂದಲಿಗೆ ಹಾಕಿಕೊಳ್ಳಿ. 2 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.