ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿರುವ ಐಸಿಯುನಲ್ಲಿ ಎಸಿ ಕೆಟ್ಟು ಹೋಗಿದ್ದ ಪರಿಣಾಮ ರೋಗಿಗಳು ಪರದಾಡಿದ್ದಾರೆ. ಎಸಿ ಇಲ್ಲದಿರುವ ಪರಿಣಾಮ ವಿಪರೀತ ಸೆಕೆಯಿಂದ ರೋಗಿಗಳು ಪರದಾಟ ಅನುಭವಿಸಿದ್ದಾರೆ.
ಕಳೆದ ಒಂದು ವಾರದಿಂದ ಐಸಿಯು ಘಟಕದಲ್ಲಿ ಎಸಿ ಕೆಟ್ಟಿದೆಯಂತೆ. ಹೀಗಾಗಿ ಸಮಪರ್ಕವಾದ ಗಾಳಿಯಿಲ್ಲದೆ ಕೆಲ ರೋಗಿಗಳು ಸಾವನ್ನಪ್ಪಿರುವುದಾಗಿ ಇತರ ರೋಗಿಗಳ ಸಂಬಂಧಿಕರು ತಿಳಿಸಿದ್ದಾರೆ. ಇನ್ನು ಈ ಕುರಿತು ಗಮನಕ್ಕೆ ಬರುತ್ತಿದ್ದಂತೆಯೇ, ಸಿಬ್ಬಂದಿ ರೋಗಿಗಳನ್ನು ಜಿಲ್ಲಾಸ್ಪತ್ರೆಯ ಮತ್ತೊಂದು ಐಸಿಯು ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ರೋಗಿಗಳು ಹಾಗೂ ಅವರ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಐಸಿಯುನಲ್ಲಿರುವ ರೋಗಿಗಳು: ಬ್ಲಡ್ನಲ್ಲಿ ಬಿಳಿ ರಕ್ತಕಣದ ಕೊರತೆಯಿಂದ ನ್ಯುಮೋನಿಯಾ ರೋಗದಿಂದ ಬಳಲುತ್ತಿರುವ ವೃದ್ಧೆಯೊಬ್ಬರು, ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿರುವ ಆಸ್ಪತ್ರೆಗೆ ದಾಖಲಾಗಿರುವ ಲೋಕೇಶ್, ಬ್ರೈನ್ ಸ್ಟ್ರೋಕ್ ನಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಕಟೇಶ್ ಹಾಗೂ ಶ್ವಾಸಕೋಶದ ಸಮಸ್ಯೆ ಉಸಿರಾಟದ ತೊಂದರೆಯಿಂದ ಅನ್ವರ್ ಐಸಿಯುವಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.