ಹುಬ್ಬಳ್ಳಿ: ಶಾಸಕ ವಿನಯ ಕುಲಕರ್ಣಿಯವರ ನಿರ್ದೇಶನದ ಮೇರೆಗೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಪರಶುರಾಮ ಮಾನೆ ಐದು ಮತ ಪಡೆದು ಸೋಲು ಅನುಭವಿಸಿದರು.
ಕಾಂಗ್ರೆಸ್‌ನ ಈರಣ್ಣ ಹಸಬಿಯವರು ಏಳು ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಅವರ ತಂಡ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಮುಖಂಡರಾದ ಮಡಿವಾಳಪ್ಪ ದಿಂಡಲ ಕೊಪ್ಪ, ನಂದೀಶ್ ನಾಯ್ಕರ, ಶಿವಾನಂದ ಮುದ್ದಿ ಸೇರಿದಂತೆ, ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರುಗಳಾದ ಬಸವಪ್ರಭು ಹುಂಬೇರಿ, ದೇವರಾಜ್ ಪಾಟೀಲ್, ಹಸನಪ್ಪ ತಳವಾರ, ಶಾಂತಕ್ಕ ಹಟ್ಟಿ, ಮಂಜುನಾಥ ಮುಗ್ಗನವರ, ಶೇಕಪ್ಪ ಕುಂಬಾರ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.