ಬೆಳಗಾವಿ : ಕ್ಯಾಬೇಜ್ ಬೆಳೆಗೆ ಸೂಕ್ತ ಬೆಲೆ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತರ ಪ್ರತಿಭಟನೆ ನಡೆಸಿದ್ದು, ತಾವು ಬೆಳೆದ ಕ್ಯಾಬೇಜ್ ರಸ್ತೆ ಮೇಲೆ ಸುರಿದ ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟ ಪಟ್ಟು ಬೆಳೆದ ಕ್ಯಾಬೇಜ್ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಸೂಕ್ತ ಬೆಲೆ ನೀಡಬೇಕು ಎಂದು ಆಗ್ರಹಿಸಿ ಧರಣಿ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು. ರೈತ ಅಪ್ಪಾಸಾಬ್ ಪಾಟೀಲ್ ನೇತೃತ್ವದಲ್ಲಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೆಂಪು ಸುಂದರಿಯ ಬೇಡಿಕೆ ಕಡಿಮೆ: ಏಕಾಏಕಿ ಟೊಮೆಟೊ ದರ ಕುಸಿತ – ಕಂಗಾಲಾದ ಗದಗ ರೈತರು!
ಮಾರುಕಟ್ಟೆಯಲ್ಲಿ ಒಂದು ಕ್ಯಾಬಿಜ್ ಗೆ ಕೇವಲ ಎಪ್ಪತ್ತು ಪೈಸೆಯಿಂದ ಒಂದು ರೂಪಾದಂತೆ ಮಾರಾಟ ಆಗುತ್ತಿದೆ. ಇದರಿಂದಾಗಿ ರೈತರಿಗೆ ತುಂಬಾ ನಷ್ಟ ಆಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಕ್ಯಾಬೇಜ್ ಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಗಸಗಾ ಗ್ರಾಮದಲ್ಲಿ ಬಹುತೇಕ ರೈತರು ಕ್ಯಾಬಿಜ್ ಬೆಳೆಯುತ್ತಾರೆ ಬಹುತೇಕ ರೈತರು ಕ್ಯಾಬಿಜ್ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಒಂದು ಎಕರೆ ಬೆಳೆಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ. ಸುಮಾರು ಎರಡು ನೂರಕ್ಕೂ ಅಧಿಕ ರೈತರು ನೂರಾರು ಎಕರೆಯಷ್ಟು ಕ್ಯಾಬಿಜ್ ಬೆಳೆದಿದ್ದಾರೆ. ಕ್ಯಾಬೇಜ್ ಬೆಳೆದ ರೈತರಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.