ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕವಾಗಿ ಗೆದ್ದು ಬೀಗಿದೆ.
ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬ ; ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ವಾರ್ನಿಂಗ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 222 ರನ್ ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ209 ರನ್ ಗಳನ್ನು ಗಳಿಸಿತು. ಹೀಗಾಗಿ ಪ್ರೇಕ್ಷಕರವನ್ನು ಕೊನೆಯ ಓವರ್ ವರೆಗೂ ತುದಿಗಾಲಲ್ಲಿ ನಿಲ್ಲಿಸಿದ ರೋಚಕ ಪಂದ್ಯದಲ್ಲಿ ಆರ್ ಸಿಬಿ ತಂಡ 12 ರನ್ ಗಳಿಂದ ಜಯಭೇರಿ ಭಾರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಬಾರಿಸಿತ್ತು. 222 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್ ಸ್ಯಾಂಟ್ನರ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲೇ ಸ್ಯಾಂಟ್ನರ್ ಸಿಕ್ಸರ್ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್ ಬಳಿ ಕ್ಯಾಚ್ ಕೊಟ್ಟರು. ಮರು ಎಸೆತದಲ್ಲಿ ದೀಪಕ್ ಚಹಾರ್ ಸಹ ಟಿಮ್ ಡೇವಿಡ್-ಫಿಲ್ ಸಾಲ್ಟ್ ಅವರ ಸ್ಟನ್ನಿಂಗ್ ಕ್ಯಾಚ್‌ಗೆ ವಿಕೆಟ್ ಒಪ್ಪಿಸಬೇಕಾಯಿತು. ಅಲ್ಲಿಗೆ ಮುಂಬೈ ಗೆಲುವಿನ ಆಸೆ ಕಮರಿತು. 3ನೇ ಎಸೆತದಲ್ಲಿ 1 ರನ್ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ನಮನ್ ಧೀರ್ ಬೌಂಡರಿ ಬಾರಿಸಿದರು. ಇನ್ನೂ 5ನೇ ಎಸೆತದಲ್ಲಿ ನಮನ್ ಕ್ಯಾಚ್ ನೀಡಿದ್ರೆ, ಕೊನೆಯ ಎಸೆತದಲ್ಲಿ ಯಾವುದೇ ರನ್ ಬರದ ಕಾರಣ ಆರ್‌ಸಿಬಿ 12 ರನ್ ಗೆಲುವು ಸಾಧಿಸಿರು.