ಮಾನ್ಯತೆ ಪಡೆಯದ ಐಪಿಎಲ್ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದಡಿ ರೀಲ್ಸ್ ಸ್ಟಾರ್ಸ್ ಗೆ ಖಾಕಿ ಶಾಕ್ ಕೊಟ್ಟಿದೆ. ಸೋನು ಶ್ರೀನಿವಾಸ್ ಗೌಡ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಇನ್ ಫ್ಲುಯೆನ್ಸರ್‌ಗಳು ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಸೋನು ಶ್ರೀನಿವಾಸ್ಗೌಡ, ದೀಪಕ್ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬೆಟ್ಟಿಂಗ್ ಆಪ್ ಪ್ರಚಾರ ಮಾಡದಂತೆ ಪೊಲೀಸರು ಖಡಖ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ರೀಲ್ಸ್ ಸ್ಟಾರ್ಗಳು ಇನ್ನು ಮುಂದೆ ಇಂತಹ ಜಾಹೀರಾತುಗಳನ್ನ ನಾವು ಪ್ರಕಟಿಸುವುದಿಲ್ಲ ಎಂದಿದ್ದಾರಂತೆ.
ರೀಲ್ಸ್ ಸ್ಟಾರ್ಸ್ ಗಳು ತಮ್ಮ ಇನ್ಸ್ಟಾಗ್ರಾಂ ಪೇಜ್ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನು ಹಾಕುತ್ತಿದ್ದರು. IPL ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಅನ್ನೋದು ಇಲ್ಲಿ ಆರೋಪ. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್ಗಳಿಗೆ ಸೈಬರ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ