Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಐಸ್ ಕ್ರೀಂ ಕಲಬೆರಕೆ, ಪನ್ನೀರ್-ಕೋವಾ ಕಳಪೆ..ಆರೋಗ್ಯ ಇಲಾಖೆ!

    By Author AINApril 8, 2025
    OLYMPUS DIGITAL CAMERA
    Share
    Facebook Twitter LinkedIn Pinterest Email
    Demo

    ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಕಲಬೆರಕೆ ಆಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಳೆದ ತಿಂಗಳು ಪನ್ನೀರು, ಐಸ್‌ ಕ್ರೀಂ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ ಗೆ ಕಳುಹಿಸಲಾಗಿತ್ತು. ಬರೋಬ್ಬರಿ 230 ಪನ್ನೀರ್‌ ಸ್ಯಾಂಪಲ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 30 ಮಾದರಿ ಪನ್ನೀರು ಸುರಕ್ಷಿತ, ಎರಡು ಮಾದರಿ ಪನ್ನೀರಿ ಸುರಕ್ಷಿತವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಈ ಮಾರ್ಚ್ ನಲ್ಲಿ 1,891 ಔಷಧಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1,298 ಉತ್ತಮ ಗುಣಮಟ್ಟದ ಔಷಧಿಗಳೆಂದು ಧೃಡಪಟ್ಟಿವೆ. 41 ಅನುತ್ತಮ ಎಂದು ಗೊತ್ತಾಗಿದೆ. ಮಾರ್ಚ್ ತಿಂಗಳಲ್ಲಿ 18 ಕೇಸ್ ಗಳನ್ನು ಹಲವು ಕಂಪನಿಗಳ ಮೇಲೆ ಹಾಕಿದ್ದೇವೆ. ರಿಂಗಲ್ ಲ್ಯಾಕ್ಟೇಟ್ ದ್ರಾವಣದ 196 ಮಾದರಿಗಳನ್ನು ಲ್ಯಾಬ್ ಗೆ ಕಳಿಸಲಾಗಿದ್ದು. 113 ಮಾದರಿಗಳು ಅನುತ್ತಮ ಎಂದು ಘೋಷಣೆಯಾಗಿದೆ ಎಂದಿದ್ದಾರೆ.

    ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣ ಬಳಕೆ ಖಚಿತಪಡಿಸಿಕೊಳ್ಳಲು 115 ಮಾದರಿಗಳನ್ನು ವಿಶ್ಲೇಷಣೆ ಮಾಡಿದ್ದೇವೆ ಎಂದಿದ್ದಾರೆ. ಮಾರ್ಚ್ ನಲ್ಲಿ ಒಟ್ಟಾರೆ 3,204 ಆಹಾರ ಪದಾರ್ಥಗಳ ವಿಶ್ಲೇಷಣೆ ಮಾಡಲಾಗಿದೆ. 590 ಹೋಟೆಲ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದ್ದು, 214 ಹೋಟೆಲ್ ರೆಸ್ಟೋರೆಂಟ್ ಗಳಿಗೆ ನೋಟಿಸ್ ಕೊಡಲಾಗಿದೆ. 11 ಹೋಟೆಲ್ ಗಳಿಗೆ 1,15,000 ರೂ ದಂಡ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಐಸ್‌ ಕ್ರೀಂ ತಯಾರಿಕ ಘಟಕಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆ 92 ಐಸ್‌ ಕ್ರೀಂ ಘಟಕಗಳಿಗೆ ನೋಟೀಸ್‌ ನೀಡಲಾಗಿದ್ದು, 6 ಐಸ್‌ ಕ್ರೀಂ ಘಟಕಕ್ಕೆ 38 ಸಾವಿರ ದಂಡ ವಿಧಿಸಲಾಗಿದೆ. ಇನ್ನು, 43 ಮಾದರಿ ಕೋವಾ ಸಂಗ್ರಹ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಕೋವಾ 3 ಕಳಪೆ ಗುಣಮಟ್ಟ, 6 ಮಾದರಿ ಅಸುರಕ್ಷಿತ ಎಂದು ತಿಳಿದು ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಜುಲೈ 8ರ ಮಂಗಳವಾರ ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್​: ಕಾರಣ?

    July 6, 2025

    ಅಪ್ರಾಪ್ತೆ ಕರೆದೊಯ್ದು ಮದುವೆಗೆ ಯತ್ನಿಸಿದ್ದ ಆರೋಪಿ ಅರೆಸ್ಟ್!

    July 6, 2025

    Namma Metro: ಇಂದು ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ!

    July 6, 2025

    ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರೇ ಮೇಕೆದಾಟು ಯೋಜನೆಗೆ ಅನುಮೋದನೆ ತನ್ನಿ: ಡಿಕೆ ಸುರೇಶ್

    July 5, 2025

    ಮೇಕೆದಾಟು ವಿಚಾರದಲ್ಲಿ ಯಾವ ಪಕ್ಷವೂ ರಾಜಕೀಯ ಮಾಡಬಾರದು: MB ಪಾಟೀಲ್

    July 5, 2025

    ಸಚಿವ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ಸುಮೋಟೋ ಕೇಸ್ ದಾಖಲು: ಕಾರಣ ಇಲ್ಲಿದೆ?

    July 5, 2025

    ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವಿಸಬಾರದಂತೆ!? ಕಾರಣ?

    July 5, 2025

    ಪ್ರಿಯಾಂಕ ಖರ್ಗೆಗೆ ಅಧಿಕಾರದ ಮದ ಹೆಚ್ಚಾಗಿದೆ: BS ಯಡಿಯೂರಪ್ಪ ವಾಗ್ದಾಳಿ!

    July 5, 2025

    ಸಿಎಂ ಹುದ್ದೆ ಖಾಲಿ ಇಲ್ಲ; ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ- ಡಿ.ಕೆ.ಸುರೇಶ್

    July 5, 2025

    ಮೆಟ್ರೋ ಪ್ರಯಾಣಿಕರೇ..ನಾಳೆ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ!

    July 5, 2025

    ಸಿದ್ದರಾಮಯ್ಯ ಸಿಎಂ ಸೀಟ್ ನಿಂದ ಕೆಳಗಿಳಿಯೋದು ಖಚಿತ: ಆರ್ ಅಶೋಕ್!

    July 5, 2025

    ಹಾಸನದಲ್ಲಿ ನಿಲ್ಲದ ಹೃದಯಾಘಾತ: ಕುಳಿತಲ್ಲೇ ಪ್ರಾಣಬಿಟ್ಟ ವ್ಯಕ್ತಿ!

    July 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.