ವಿಜಯಪುರ : ಇಂದು ದ್ವಿತೀಯ ಪಿಯುಸಿ ಪರೀಕ್ಷ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆರ್ ಡಿ ಪಾಟೀಲ್ ಪಿಯು ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 23ನೇರ ರ್ಯಾಂಕ್ ಪಡೆದಿದ್ದಾರೆ.
589 ಅಂಕಗಳನ್ನು ಪಡೆದು ಮಲಕಣ್ಣ ತಳವಾರ ರಾಜ್ಯಕ್ಕೆ 23 ನೇ ರ್ಯಾಂಕ್ ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ 97, ಹಿಂದಿ 98, ಇತಿಹಾಸ 100, ಸಮಾಜಶಾಸ್ತ್ರದಲ್ಲಿ 96, ರಾಜ್ಯಶಾಸ್ತ್ರದಲ್ಲಿ 98, ಶಿಕ್ಷಣ ಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.
ದ್ವಿತೀಯ ಪಿಯು ಫಲಿತಾಂಶ ; 596 ಅಂಕ ಪಡೆದ ನಿರ್ಮಲಾ ದ್ವಿತೀಯಾ ರ್ಯಾಂಕ್
ಮೂಲತಃ ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಬೆಳುಂಡಗಿ ಗ್ರಾಮದ ಮಲಕಣ್ಣ, ಕೃಷಿ ಕುಟುಂಬದಿಂದ ಬಂದಿರುವ ವಿದ್ಯಾರ್ಥಿ. ಮಲಕಣ್ಣ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಭೀಮನಗೌಡ ಸಿಂಗನಹಳ್ಳಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.