ಚಾಮರಾಜನಗರ : ನಾಲ್ವರು ಕಳ್ಳಬೇಟೆಗಾರರ ಬಂಧಿಸಿರುವ ಪೊಲೀಸರು, ಬಂಧಿತರಿಂಧ ನಾಲ್ಕು ಅಕ್ರಮ ನಾಡ ಬಂದೂಕು ವಶ ಪಡೆಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರಡಿಗುಡ್ಡ ಸಮೀಪ ಮಂಗಳವಾರ ಮುಂಜಾನೆ 4 ಗಂಟೆಯಲ್ಲಿ ಘಟನೆಯಲ್ಲಿ ಅಕ್ರಮ ನಾಡ ಬಂದೂಕು ಹೊಂದಿದ್ದ ನಾಲ್ವರನ್ನು ಬಂಧಿಸಲಾಗಿದೆ. ಪ್ರದೀಪ, ರಾಮು , ಕೃಷ್ಣ ದೇವರಾಜು ಬಂಧಿತ ಆರೋಪಿಗಳಾಗದ್ದು, ಎಸ್ಪಿ ಕವಿತಾ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸದ್ಯ ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.