ಸಿಂಗಾಪುರದಲ್ಲಿ ಶಾಲೆಯೊಂದರಲ್ಲಿ ಮಂಗಳವಾರ ಸಂಭವಿಸಿದ್ದ ಬೆಂಕಿ ಆವರಣದಲ್ಲಿ ಟಾಲಿವುಡ್ ಸ್ಟಾರ್ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಿರಿಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಾಮರಾಜನಗರ: ನಿಲ್ಲದ ಕಾಡಾನೆಗಳ ಹಾವಳಿ, ಬಾಳೆ ತೋಟಕ್ಕೆ ನುಗ್ಗಿ ಅಪಾರ ಬೆಳೆ ನಾಶ
ವಿಷಯ ತಿಳಿಯುತ್ತಿದ್ದಂತೆ ಸಿಂಗಾಪುರಕ್ಕೆ ತೆರಳಿದ ಪವನ್ ಕಲ್ಯಾಣ್ ಅವರು ಮಗನ ಆರೋಗ್ಯ ವಿಚಾರಿಸಿದ್ದಾರೆ. ಸಿಂಗಾಪುರಕ್ಕೆ ತೆರಳುವ ಮುನ್ನ ಪುತ್ರನ ಆರೋಗ್ಯ ಸ್ಥಿತಿ ಹೇಗಿದೆ ಎಂದು ಪವನ್ ಕಲ್ಯಾಣ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಶಂಕರ್ಗೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪವನ್ ಕಲ್ಯಾಣ್ ಮಾತನಾಡಿ, ಪುತ್ರ ಮಾರ್ಕ್ ಶಂಕರ್ ಶಾಲೆಯ ಸಮ್ಮರ್ ಕ್ಯಾಂಪ್ಗೆ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪುತ್ರನೊಂದಿಗೆ ಇತರೆ ವಿದ್ಯಾರ್ಥಿಗಳು ಸಹ ಇದ್ದರು. ಮಗನ ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದಿದ್ದಾರೆ.
ಮಗನ ಶ್ವಾಸಕೋಶವನ್ನು ಸರಿಪಡಿಸಲು ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ಹಾಗಾಗಿ ಮಗನಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು. ಸಹೋದರ ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದಾರೆ. ಮಗನನ್ನು ನೋಡಲು ಕುಟುಂಬದ ಜೊತೆ ಹೋಗಿದ್ದಾರೆ.