ಬೆಂಗಳೂರು:- ಎಲ್ಲಾ ಫ್ರೀ, ಫ್ರೀ, ಫ್ರೀ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ತನ್ನ ಕ್ಯಾತೆ ಬದಲಿಸಿದೆ. ತನ್ನ ಗ್ಯಾರಂಟಿ ಹೊರೆ ಕಡಿಮೆ ಮಾಡಲು ಜನರಿಗೆ ಬರೆ ಕೊಡುತ್ತಿದೆ. ಅಯ್ಯೋ ದೇವ, ಹೀಗಾದ್ರೆ ಜೀವನ ಹೇಗಪ್ಪಾ? ಎಂಬ ಮಟ್ಟಿಗೆ ಕರುನಾಡಿನ ಜನರ ಸ್ಥಿತಿ ಆಗಿದೆ.
ಬಿರುಗಾಳಿ ಮಳೆಗೆ ಕಟ್ ಆಗಿ ಬಿದ್ದ ವಿದ್ಯುತ್ ತಂತಿ ; ದೂರು ಕೊಟ್ಟರು ಹೆಸ್ಕಾಂ ನಿರ್ಲಕ್ಷ್ಯ
ಹಾಲು, ಮೊಸರು, ತುಪ್ಪ, ಬಸ್, ಕರೆಂಟ್, ಮೆಟ್ರೋ, ಎಲ್ಲವೂ ಆಯ್ತು ಈಗ ನೀರಿನ ಸರದಿ. ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ, ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ವಿವರಗಳನ್ನು ನೀಡಿದ್ದಾರೆ.
ನೀರಿನ ದರ ಏರಿಕೆ:-
ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ ಹೆಚ್ಚಳವಾಗಲಿದೆ.
8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ ಹೆಚ್ಚಳವಾಗಲಿದೆ.
25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.
50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.
ದರ ಏರಿಕೆ ಏಪ್ರಿಲ್ನಿಂದಲೇ ಅನ್ವಯ
ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದೀಗ ಸದ್ಯದ ತೀರ್ಮಾನದಿಂದಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಅವರು ಹೇಳಿದ್ದಾರೆ